ನನ್ನ ಗೆಳತಿಯನ್ನು ಯಾರಾದ್ರು ಮದುವೆಯಾದ್ರೆ ಅವರನ್ನು ಕೊಲೆ ಮಾಡುವೆ! | Girlfriend

Untitled design - 2025-08-01T151936.773
Published on

Girlfriend: ಆಕೆಯನ್ನು ಯಾರಾದರೂ ಮದುವೆಯಾದ್ರೆ ಆ ವ್ಯಕ್ತಿಯನ್ನು ಕೊಲೆ ಮಾಡುತ್ತೇನೆ ಎಂದು ಗೆಳಯನೊಬ್ಬ ತನ್ನ ಗೆಳತಿಗೆ ಬೆದರಿಕೆ ಹಾಕಿದ ಘಟನೆ ಹೈದರಾಬಾದ್​​ನಲ್ಲಿ ಗುರುವಾರ ನಡೆದಿದೆ. ಇನ್ನು ಈತನ ವಿರುದ್ಧ ಗೆಳತಿ ದೂರಿನ ಮೇರಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೈದರಾಬಾದ್​ನ ಫತೇನರದ ಎಲ್​​ಬಿನಗರ ನಿವಾಸಿ ರವಿಕುಮಾರ್​ ಎಂದು ಬೆದರಿಕೆ ಹಾಕಿದ ಆರೋಪಿ ಎಂದು ಗುರುತಿಸಲಾಗಿದೆ.

ನಡೆದ ಘಟನೆ ಏನು?

ರವಿಕುಮಾರ್ ಎನ್ನುವ ವ್ಯಕ್ತಿ ಜತೆ ಉಷಾ (ಬೇರೆ ಹೆಸರು ಬಳಸಲಾಗಿದೆ) ಪರಿಚಯವಾಗಿ ಕೆಲ ತಿಂಗಳು ಕಳೆದಿದೆ. ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದೆ. ಆದರೆ, ಕೆಲ ದಿನಗಳ ಬಳಿಕ ಇಬ್ಬರ ನಡುವೆ ವೈಮನಸ್ಸಾಗಿ ದೂರ ಆಗಿದ್ದಾರೆ. ಆದ್ರೆ, ರವಿಕುಮಾರ್​ ಮಾತ್ರ ಉಷಾಗೆ ಪೋನ್​ ಮಾಡುತ್ತಿದ್ದನು. ಅಲ್ಲದೆ, ಬೇರೆ ವಿಷಯಗಳಿಗೂ ಕೂಡ ಕಿರುಕುಳ ನೀಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ (ಕಿರುಕುಳ) ಆಕೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಇದರ ನಂತರ, ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದ್ದಾರೆ. ಮತ್ತೆ ಭೇಟಿಯಾಗದಿರಲು ಒಪ್ಪಿಕೊಂಡರು.

ಇದರ ಮಧ್ಯೆ ಉಷಾಗೆ ಯುವಕನೊಬ್ಬನ ಜತೆ ನಿಶ್ಚಿತಾರ್ಥವಾಗಿದೆ. ಈ ಬಗ್ಗೆ ತಿಳಿದ ರವಿಕುಮಾರ್​, ಆಕೆಗೆ ಫೋನ್​​ಗೆ ಮಾಡಿ ಯಾರನ್ನಾದ್ರೂ ಮದುವೆಯಾದ್ರೆ ಆ ವ್ಯಕ್ತಿಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಈ ಪೊಲೀಸ್​ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net