ಇದು ಎಂಥಾ ಲೋಕವಯ್ಯಾ...!: ಪರಪುರುಷರನ್ನು ಹೊಡೆಯಲು ಅನುಮತಿ

yanta lokavaiha 2 mar 20
Published on

ಹೋಳಿ ಹಬ್ಬದಂದು ಸಾಮಾನ್ಯವಾಗಿ ಎಲ್ಲೆಡೆ ಪುರುಷರು ಹಾಗೂ ಸ್ತ್ರೀಯರು ಬಣ್ಣದ ಓಕಳಿ ಆಟವಾಡಿದರೆ ಉತ್ತರ ಪ್ರದೇಶದ ಮಥುರಾದಲ್ಲಿ ಹೆಂಗಸರು ಕೋಲಿನಿಂದ ಗಂಡಸರನ್ನು ಹೊಡೆಯುವ ಸಂಪ್ರದಾಯವಿದೆ. ಇದರ ಹೆಸರು ಲಾತ್​ವಾರ್ ಹೋಳಿ (ಕೋಲಿನಿಂದ ಹೊಡೆಯುವ ಹೋಳಿ ಎಂದರ್ಥ). ಇಲ್ಲಿರುವ ಬರ್​ಸಾನಾ ಎಂಬ ಹಳ್ಳಿಯಲ್ಲಿರುವ ರಾಧಾ- ರಾಣಿ ದೇವಾಲಯದಲ್ಲಿ ಉತ್ಸವ ಆರಂಭವಾಗುತ್ತದೆ. ಪುರುಷರು ಮತ್ತು ಮಹಿಳೆಯರು ಇಲ್ಲಿ ಸೇರುತ್ತಾರೆ. ಮೊದಲು ಗಂಡಸರು ಗ್ರಾಮದ ಹೆಣ್ಣುಮಕ್ಕಳಿಗೆ ಬಣ್ಣ ಹಚ್ಚಲು ಪ್ರಯತ್ನಿಸುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಹೆಣ್ಣುಮಕ್ಕಳು ಕೋಲಿನಿಂದ ಹೊಡೆಯುತ್ತಾರೆ. ಈ ಹೊಡೆತ ತಪ್ಪಿಸಿಕೊಳ್ಳಲು ಗಂಡಸರು ಅಡ್ಡಲಾಗಿ ಗುರಾಣಿ ಹಿಡಿದುಕೊಳ್ಳುತ್ತಾರೆ. ಪತಿಯೇ ಪರದೈವ ಎಂದುಕೊಳ್ಳುವ ಭಾರತೀಯ ಹೆಂಗಸರು ಮನೆಯಲ್ಲಿ ಗಂಡನನ್ನು ಹೊಡೆಯಲು ಆಗದಿದ್ದರೂ ಬೇರೆ ಗಂಡಸರನ್ನು ಹೊಡೆದು ಸಮಾಧಾನ ಪಟ್ಟುಕೊಳ್ಳಲೋ ಎಂಬಂತೆ ಗುರಾಣಿ ಹಿಡಿದಿದ್ದರೂ ಬಿಡದೆ ಬೇರೆ ಗಂಡಸರನ್ನು ಹೊಡೆಯಲು ಮುಂದಾಗುತ್ತಾರೆ. ಈ ದೃಶ್ಯ ನೋಡುಗರಿಗೆ ಬಲು ಮೋಜು ಎನ್ನಿಸುತ್ತದೆ. ಈ ಸಂಪ್ರದಾಯವನ್ನು ಒಂದು ಶತಮಾನದಿಂದ ಆಚರಿಸಿಕೊಂಡು ಬರಲಾಗಿದೆ.

ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net