More

    ಪತಂಜಲಿ ಕರೊನಾ ನಿಗ್ರಹ ಔಷಧಕ್ಕೆ ಪ್ರತಿಕ್ರಿಯಿಸದ ಐಸಿಎಂಆರ್​, ಆಯುಷ್​ ಇಲಾಖೆ

    ನವದೆಹಲಿ: ಪತಂಜಲಿ ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿರುವ ಕರೊನಾ ನಿವಾರಕ ಔಷಧದ ಬಗ್ಗೆ ಪ್ರತಿಕ್ರಿಯಿಸಲು ಆಯುಷ್​ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗಳು ಹಿಂದೇಟು ಹಾಕಿವೆ.

    ಪತಂಜಲಿ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ ಕರೊನಿಲ್​ ಮಾತ್ರೆ ಕೋವಿಡ್​-19 ಕಾಯಿಲೆಯನ್ನು ಶೇ.100 ಗುಣಪಡಿಸಲಿದೆ ಎಂದು ಯೋಗಗುರು ಬಾಬಾ ರಾಮ್​ದೇವ್​ ಹೇಳಿದ್ದರು.

    ಇದನ್ನೂ ಓದಿ; 20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ

    ಕರೊನಿಲ್​ ಔಷಧವನ್ನು ರೋಗಿಗಳ ಮೇಲೆ ಪ್ರಯೋಗಿಸಲಾಗಿದ್ದು, ಪರಿಣಾಮಕಾರಿ ಎನಿಸಿದೆ ಎಂದು ಸಂಸ್ಥೆಯ ಕೇಂದ್ರ ಕಚೇರಿ ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಶೇ.69 ರೋಗಿಗಳು ಮುರು ದಿನದಲ್ಲಿ ಗುಣ ಹೊಂದಿದರೆ, ಏಳು ದಿನಗಳಲ್ಲಿ ಎಲ್ಲ ರೋಗಿಗಳು ಆರೋಗ್ಯವಂತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜೈಪುರ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಸಹಯೋಗದಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದ್ದರು.

    ಆದರೆ, ಕೋವಿಡ್​ ಚಿಕಿತ್ಸೆ, ಲಸಿಕೆ, ಔಷಧ ಮತ್ತಿತರ ಆರೋಗ್ಯ ವ್ಯವಸ್ಥೆ ಕುರಿತ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಉನ್ನತ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ಕರೊನಿಲ್​ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆಯುರ್ವೇದ ಔಷಧಗಳ ಬಗ್ಗೆ ನಾವು ಪರಿಶೀಲನೆ ನಡೆಸುವುದಿಲ್ಲ. ಈ ಕಾರ್ಯವನ್ನು ಆಯುಷ್​ ಇಲಾಖೆ ನಡೆಸುತ್ತದೆ ಎಂದು ಹೇಳಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…! 

    ಆಯುಷ್​ ಇಲಾಖೆಯನ್ನು ಪ್ರಶ್ನಿಸಿದಾಗ ಮೊದಲು ಐಸಿಎಂಆರ್​ನತ್ತ ಬೊಟ್ಟು ಮಾಡಿತ್ತು. ಆದರೆ, ಐಸಿಎಂಆರ್​ ಪ್ರತಿಕ್ರಿಯೆ ತಿಳಿದ ಬಳಿಕ, ಆಯುರ್ವೇದ ಔಷಧಗಳ ಉತ್ಪಾದನೆ, ಔಷಧ ಸಂಸ್ಥೆಗೆ ಪರವಾನಗಿ ಮೊದಲಾವುಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ನುಣುಚಿಕೊಂಡಿದೆ. ಪತಂಜಲಿ ಸಂಸ್ಥೆ ಹೇಳುವ ಪ್ರಕಾರ ಕರೊನಿಲ್​ ಔಷಧ ಪರವಾನಗಿ ಪಡೆದುಕೊಂಡಿದೆ.

    ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts