More

    19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲೀಯ ಕೊತ್ತಗೆರೆ ಶಂಕರ

    ತುಮಕೂರು: ಪಾವಗಡ ತಾಲೂಕು ವೆಂಕಟಮ್ಮನಹಳ್ಳಿಯಲ್ಲಿ 19 ವರ್ಷದ ಹಿಂದೆ ನಡೆದಿದ್ದ ನಕ್ಸಲೀಯ ದಾಳಿ ಪ್ರಕರಣದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 32 ಜನ ಆರೋಪಿಗಳ ಮೇಲೆ ಪಾವಗಡದ ಘನ ಸಿಜೆಜೆಡಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು ನಕ್ಸಲೀಯ ಕೊತ್ತಗೆರೆ ಶಂಕರ(38) ಎಂಬುವವನನ್ನು ಬಂಧಿಸಲಾಗಿದೆ.

    ನಕ್ಸಲೀಯ ಪ್ರಕರಣದ ಆರೋಪಿ ಕೊತ್ತಗೆರೆ ಶಂಕರ , ಬಿಬಿಎಂಪಿ ಯಲ್ಲಿ ಡ್ರೆÊವರ್ ಕೆಲಸ, ಗೌರಿಪಾಳ್ಯ, 2ನೇ ಹಂತ, 8ನೇ ಮುಖ್ಯರಸ್ತೆ, ವೆಂಕಟಸ್ವಾಮಿ ಗಾರ್ಡನ್, ಬೆಂಗಳೂರು ನಗರ. ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    ಏನಿದು ಘಟನೆ?:

    2005 ಫೆ.10ರಂದು ರಾತ್ರಿ 10.30ರ ಸಮಯದಲ್ಲಿ ಪಾವಗಡ ತಾಲೂಕು ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೂಯಿಸ್ಟ್ ನಕ್ಸಲೀಯರು ಬಂದೂಕುಗಳು, ಬಾಂಬ್‌ಗಳು, ಹ್ಯಾಂಡ್ ಗ್ರೆÊನೇಡ್‌ಗಳೊಂದಿಗೆ ದಾಳಿ ನಡೆಸಿ, ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಕೊಲೆ ಮಾಡಿ, 5 ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯಗಳನ್ನು ಮಾಡಿ ಕ್ಯಾಂಪಿನ ಈಚೆ ನಿಂತಿದ್ದ ಖಾಸಗಿ ಬಸ್‌ನ ಕ್ಲೀನರ್‌ನನ್ನು ಸಹ ಕೊಲೆ ಮಾಡಿ, ಕ್ಯಾಂಪ್‌ನಲ್ಲಿದ್ದ ಬಂದೂಕುಗಳು ಮತ್ತು ಗುಂಡುಗಳನ್ನು ದೋಚಿದ್ದರು.

    ಈ ಬಗ್ಗೆ ತಿರುಮಣಿ ಪೊಲೀಸ್ ಠಾಣಾ ಮೊನಂ: 07/2005, ಕಲಂ:143, 144, 147, 148, 307, 302, 396, 353, 120,121(ಬಿ),109, 332, 333 ರೆ/ವಿ 149 ಐಪಿಸಿ ಕಲಂ:3.4.5 ಸ್ಪೋಟಕ ನಿಯಂತ್ರಣ ಕಾಯ್ದೆ ಕಲಂ:25 ಶಸ್ತಾçಸ್ತ ಅಧಿನಿಯಮ ಅಡಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts