More

    ಪಾಲಾರ್‌ನಲ್ಲಿ ಮರು ವಸತಿ ಕಲ್ಪಿಸಿಕೊಡಿ

    ಹನೂರು: ಮೆಂದಾರೆ ಗ್ರಾಮವು ಮಹದೇಶ್ವರ ಬೆಟ್ಟದ ಕಾಡಂಚಿನ ಕೊನೆಯ ಗ್ರಾಮ. ಇಲ್ಲಿ ನಮ್ಮ ತಾತ, ಮುತ್ತಾತನ ಕಾಲದಿಂದಲೂ ಬಾಳಿದ್ದಾರೆ. ಆದರೆ, ನಮಗೆ ಇಲ್ಲಿಂದ ಪಾಲಾರ್‌ನಲ್ಲಿ ಮರು ವಸತಿ ಕಲ್ಪಿಸಿಕೊಡಬೇಕೆಂದು ಮದಹೇಶ್ವರ ಬೆಟ್ಟದ ಮೆಂದಾರೆ ಗ್ರಾಮದ ಶಿವಕುಮಾರ್ ಒತ್ತಾಯಿಸಿದರು.

    ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು,
    ನಮಗೆ ಇಲ್ಲಿ ಇರಲು ಇಷ್ಟವಿಲ್ಲ. ಗ್ರಾಮದಲ್ಲಿ ಸೌಲಭ್ಯ ನೀಡುವ ಬದಲು ಸ್ಥಳಾಂತರ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಪಾಲಾರ್‌ನಲ್ಲಿ ನಮ್ಮ ಸಮುದಾಯದ ಜನರು ಇದ್ದಾರೆ. ಅವರೊಂದಿಗೆ ಇರಲು ಬಯಸುತ್ತಿದ್ದೇವೆ. ಅಲ್ಲಿ ರಸ್ತೆ ಸೌಲಭ್ಯವಿದೆ. ನಮ್ಮ ಜನರು ತಮಿಳುನಾಡಿಗೆ ಕೂಲಿಗೆ ಹೋಗುತ್ತಾರೆ. ಅಲ್ಲಿಂದ ಕೂಲಿಗೆ ಹೋಗುವುದಕ್ಕೆ ಸುಲಭವಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts