ಕ್ರಿಕೆಟ್​ ಆಟ ನಿಂತಿದ್ದರೂ ಬುಕ್ಕಿಗಳ ಕರಾಮತ್ತು ನಿಂತಿಲ್ಲ: ಮನೆಯಲ್ಲಿರುವ ಆಟಗಾರರನ್ನು ಸಂಪರ್ಕಿಸುತ್ತಿರುವ ಭ್ರಷ್ಟರು

icc
Published on

ಲಂಡನ್: ಲಾಕ್​ಡೌನ್​ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ಬುಕ್ಕಿಗಳು ಕ್ರಿಕೆಟ್​ ಆಟಗಾರರನ್ನು ಸಂಪರ್ಕಿಸಿ ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್​ ಮಾರ್ಷಲ್​ ತಿಳಿಸಿದ್ದಾರೆ.

ಮಾರ್ಚ್​ 15ರಂದು ಪಾಕಿಸ್ತಾನದಲ್ಲಿ ನಡೆದ ಸೂಪರ್​ ಲೀಗ್​ ಪಂದ್ಯದ ನಂತರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾವಳಿಗಳು ನಡೆದಿಲ್ಲ. ಎಲ್ಲ ಆಟಗಾರರು ಲೌಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದಾರೆ. ಇದರಿಂದ ಅವರು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ದಿ ಗಾರ್ಡಿಯನ್'ಗೆ ಸಂದರ್ಶನ ನೀಡಿದ್ದಾರೆ.

ಪಂದ್ಯಾವಳಿ ಇಲ್ಲದೆ ಆಟಗಾರರ ಆದಾಯ ಕುಸಿತವಾಗಿದೆ. ಅಲ್ಲದೆ ಕಡಿಮೆ ಆದಾಯ ಪಡೆಯುವ ಕ್ರಿಕೆಟ್​ ಆಟಗಾರನ್ನು ಸಂಪರ್ಕಿಸಿ ಅವರನ್ನು ಶೋಷಣೆ ಮಾಡಲು ಮುಂದಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕರೊನಾ ವೈರಸ್​ ಹಾವಳಿಯಿಂದ ಕ್ರಿಕೆಟ್​ ಆಟ ನಿಂತಿರಬಹುದು. ಆದರೆ ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬುಕ್ಕಿಗಳು ಆಟಗಾರರ ಸಂಪರ್ಕ ಸಾಧಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕ ಬುಕ್ಕಿಗಳ ಮೇಲೆ ಸಂಪೂರ್ಣ ನಿಗಾವಹಿಸಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net