

ಹೈದರಾಬಾದ್: ಟಾಲಿವುಡ್ ನಟಿ ಸ್ವಾತಿ ರೆಡ್ಡಿ ಅವರು 2018 ರಲ್ಲಿ ಮದುವೆಯಾದ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇವರು ಪತಿಯಿಂದ ದೂರವಾಗಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಕುರಿತಾಗಿ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.
ವರದಿಗಳ ಪ್ರಕಾರ ಸ್ವಾತಿ ಮತ್ತು ಆಕೆಯ ಪತಿ ಬೇರೆಯಾಗಿದ್ದಾರೆ. ತನ್ನ ಸಂಗಾತಿಗೆ ವಿಚ್ಛೇದನ ನೀಡಿದ ನಂತರ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ಪ್ರಚಾರ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಸ್ವಾತಿ ಅವರಿಗೆ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಧ್ಯಮಗಳು ಕೇಳಿದ್ದವು. ಆದರೆ ನಟಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಅದೊಂದು ಸಂಬಂಧವಿಲ್ಲದ ಪ್ರಶ್ನೆ. ನಾನು ಮಾತನಾಡುವುದಿಲ್ಲ. ವಿಚ್ಛೇದನ ಅಥವಾ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಸ್ವಾತಿ ರೆಡ್ಡಿ ಹೇಳಿದ್ದಾರೆ.
ಸ್ವಾತಿ ರೆಡ್ಡಿ ತೆಲಗು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಾತಿ ರೆಡ್ಡಿ ಅಭಿನಯದ 'ಮಂತ್ ಆಫ್ ಮಧು' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಆಕರ್ಷಕವಾಗಿದೆ. ಶ್ರೀಕಾಂತ್ ನಾಗೋಟಿ ಈ ಚಿತ್ರದ ನಿರ್ದೇಶಕರು. ಯಶವಂತ್ ನಿರ್ಮಾಣ ಮಾಡುತ್ತಿದ್ದಾರೆ.