'ಜವಾನ್'​ ಹೊಗಳಿದ ಅಲ್ಲು ಅರ್ಜುನ್; 3 ದಿನಗಳಲ್ಲಿ ಮೂರು ಬಾರಿ 'ಪುಷ್ಪ' ಸಿನಿಮಾ ನೋಡಿದ್ದೇನೆ ಎಂದ ಕಿಂಗ್​ ಖಾನ್

Untitled design - 2023-09-14T152151.575
Published on

ಮುಂಬೈ: ಬಾಲಿವುಡ್​ನ ಕಿಂಗ್​ ಖಾನ್​ ಅಭಿನಯದ 'ಜವಾನ್'​ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಜತೆಗೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿದ ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಇಂದು ಟ್ವೀಟ್​ ಮಾಡಿ ಇಡೀ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾರೂಖ್​ ಖಾನ್, ರಿ-ಟ್ವೀಟ್​ ಮಾಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್​ ಅಂಗಳದ 'ಜವಾನ್' ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗಳನ್ನು ಮೀರಿ ಉತ್ತಮ ಗಳಿಕೆಯನ್ನು ಮಾಡುತ್ತಿದ್ದು, ನೂತನ ದಾಖಲೆಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ತೆರಳುತ್ತಿರುವ ಸಿನಿಪ್ರೇಕ್ಷಕರು, ಶಾರೂಖ್ ಸಿನಿಮಾಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಅಲ್ಲು ಅರ್ಜುನ್​ ಕೂಡ ಸೇರ್ಪಡೆಗೊಂಡಿದ್ದಾರೆ.

ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ ಅಲ್ಲು ಅರ್ಜುನ್​ ಟ್ವೀಟ್​ಗೆ ಪ್ರತಿಕ್ರಿಯಿಸಿದ ಶಾರೂಖ್, "ತುಂಬು ಹೃದಯದ ಧನ್ಯವಾದಗಳು. ಸ್ವತಃ 'ದಿ ಫೈರ್' ನನ್ನನ್ನು ಹೊಗಳಿದ್ದಾರೆ. ವಾಹ್! ನಾನು ಮೂರು ದಿನಗಳಲ್ಲಿ ಮೂರು ಬಾರಿ 'ಪುಷ್ಪ' ಚಿತ್ರವನ್ನು ನೋಡಿದ್ದೇನೆ. ಸಾಧ್ಯವಾದಷ್ಟು ಬೇಗ ಬಂದು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಪ್ಪುಗೆ ನೀಡುತ್ತೇನೆ. ಲವ್​ ಯೂ" ಎಂದು ಟ್ವೀಟ್​ ಮಾಡಿದ್ದಾರೆ, (ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net