ಇಂಡೋ-ಪಾಕ್​ ಯುದ್ದ ನಿಲ್ಲಿಸಿದ್ದು ನಾನೇ : ಅಮೆರಿಕ ಜಗತ್ತಿನ ಶಾಂತಿಪಾಲಕ ಎಂದು ಡೊನಾಲ್ಡ್​ ಟ್ರಂಪ್​ | Donald Trump

Donald Trump
Published on

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ವಿಧಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಈ ಕ್ರಮವು ನಾವು ಶಾಂತಿಪಾಲಕನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಟ್ರಂಪ್​, ಅಮೆರಿಕ ತನ್ನ ನಿಲುವನ್ನು ಮರುಪರಿಶೀಲಿಸುತ್ತದೆಯೇ ಎಂದು ಕೇಳಿದಾಗ, ನಾನು ತಡೆದಿದ್ದೇನೆಂದು ಹೇಳಿಕೊಳ್ಳುವ ಏಳು ಯುದ್ಧಗಳಲ್ಲಿ ನಾಲ್ಕು ಉಲ್ಬಣಗೊಳ್ಳುತ್ತಿದ್ದವು. ಅಲ್ಲದೆ, ಭಾರತ-ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸಲು ನಾನು ಸುಂಕದ ಪಾತ್ರವು ದೊಡ್ಡದಿದೆ ಎಂದು ಮತ್ತೆ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್​​​​, ನನಗೆ ಸುಂಕ ವಿಧಿಸುವ ಅಧಿಕಾರವಿಲ್ಲದಿದ್ದರೆ, ಏಳು ಯುದ್ಧಗಳಲ್ಲಿ ಕನಿಷ್ಠ ನಾಲ್ಕು ನಡೆಯುತ್ತಿದ್ದವು. ನೀವು ಭಾರತ ಮತ್ತು ಪಾಕ್​ ಸಂಘರ್ಷ ನೋಡಿದರೆ, ಎರೆಡು ದೇಶಗಳು ಯುದ್ದ ಮಾಡಲು ಸಿದ್ಧರಾಗಿದ್ದರು. ಅಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು. ಅಲ್ಲದೆ, ನಾನು ಹೇಳಿದ್ದನ್ನು ನಿಖರವಾಗಿ ಹೇಳಲು ಬಯಸುವುದಿಲ್ಲ. ಆದರೆ, ನಾನು ಹೇಳಿದ್ದು ತುಂಬಾ ಪರಿಣಾಮಕಾರಿಯಾಗಿದೆ. ನಾವು ನೂರಾರು ಶತಕೋಟಿ ಡಾಲರ್‌ಗಳನ್ನು ಗಳಿಸಿದ್ದೇವೆ ಮಾತ್ರವಲ್ಲದೆ, ಸುಂಕಗಳಿಂದಾಗಿ ನಾವು ಶಾಂತಿಪಾಲಕರಾಗಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.

ಜಾಗತಿಕ ವಿವಾದಗಳನ್ನು ಪರಿಹರಿಸುವ ಟ್ರಂಪ್ ಅವರ ಹೇಳಿಕೆ

ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ-ಪಾಕ್​ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಅಮೆರಿಕದ ಹಸ್ತಕ್ಷೇಪ ಪ್ರಮುಖ ಪಾತ್ರ ವಹಿಸಿದೆ. ಇದಕ್ಕೂ ಮೊದಲು, ಗಾಜಾ ಶಾಂತಿ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಒತ್ತಡ ಹೇರುತ್ತಿದ್ದಾಗ, ಟ್ರಂಪ್ ತಮ್ಮ ಆಡಳಿತವು ಅಧಿಕಾರಕ್ಕೆ ಬಂದ ಕೇವಲ ಒಂಬತ್ತು ತಿಂಗಳೊಳಗೆ ಅನೇಕ ಅಂತರರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸಿದೆ ಎಂದು ಟ್ರಂಪ್​ ಹೆಮ್ಮೆಪಡುತ್ತಿದ್ದಾರೆ.

ನಾನು ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ.ಪಾಕಿಸ್ತಾನ- ಭಾರತವು ತುಂಬಾ ಯುದ್ದ ದೊಡ್ಡದಾಗಿತ್ತು, ಎರಡೂ ಪರಮಾಣು ಶಕ್ತಿಗಳು, ನಾನು ಇದನ್ನು ಇತ್ಯರ್ಥಪಡಿಸಿದೆ ಎಂದು ಟ್ರಂಪ್ ಮತ್ತೆ ಹೇಳಿಕೊಂಡಿದ್ದಾರೆ.

ಹಮಾಸ್‌ಗೆ ಟ್ರಂಪ್​ ಕಠಿಣ ಎಚ್ಚರಿಕೆ

ಮಧ್ಯಪ್ರಾಚ್ಯ ಅಶಾಂತಿಯ ಕುರಿತು ಮಾತನಾಡಿದ ಟ್ರಂಪ್, ವಿವಾದವನ್ನು ಪರಿಹರಿಸುವ ಅಂಚಿನಲ್ಲಿದ್ದೇನೆ. ಹಮಾಸ್ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕಾಯಿತು. ರಷ್ಯಾ-ಉಕ್ರೇನ್ ಯುದ್ಧದ ಕುರಿತು ಮಾತನಾಡಿದ ಟ್ರಂಪ್, ತಾವು ಮೊದಲು ಅಧ್ಯಕ್ಷರಾಗಿದ್ದರೆ, ಸಂಘರ್ಷ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷ 3,000 ವರ್ಷಗಳಿಂದ ಬಗೆಹರಿಸಲು ಆಗಿಲ್ಲ. ಹಮಾಸ್ ಈ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳಲೇಬೇಕು. ಹಮಾಸ್​ ಒಪ್ಪಿಕೊಳ್ಳದಿದ್ದರೆ, ಹಮಾಸ್​ ಮೇಲೆ ತುಂಬಾ ಕಠಿಣವಾಗಿರುತ್ತದೆ. ಅಲ್ಲದೆ, ಎಲ್ಲಾ ಅರಬ್ ರಾಷ್ಟ್ರಗಳು, ಮುಸ್ಲಿಂ ರಾಷ್ಟ್ರಗಳು ಒಪ್ಪಿಕೊಂಡಿವೆ. ಇಸ್ರೇಲ್ ಒಪ್ಪಿಕೊಂಡಿದೆ. ಯುದ್ಧದಿಂದ ಏನಾಗುತ್ತದೆ ಎಂದು ನಿಮಗೆ ಎಂದಿಗೂ ತಿಳಿದಿಲ್ಲ. ಇವುಗಳಲ್ಲಿ ಅತ್ಯಂತ ಸುಲಭವಾದದ್ದು ಪುಟಿನ್. ನಾನು ಅಧ್ಯಕ್ಷನಾಗಿದ್ದರೆ, ಚುನಾವಣೆಯಲ್ಲಿ ಅಕ್ರಮಗಳು ನಡೆಯದಿದ್ದರೆ ಇದು ಎಂದಿಗೂ ಸಂಭವಿಸದ ಯುದ್ಧವಾಗುತಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net