More

    ನಿನ್ನ ಹೆಂಡ್ತಿ ಅಂದ್ರೆ ನನಗಿಷ್ಟ ಎಂದ ಭಾರತೀಯನಿಗೆ ಪ್ಯಾಟ್​ ಕಮಿನ್ಸ್​ ಕೊಟ್ಟ ಉತ್ತರ ವೈರಲ್​!

    ನವದೆಹಲಿ: ಇನ್​ಸ್ಟಾಗ್ರಾಂನಲ್ಲಿ ಭಾರತೀಯ ಅಭಿಮಾನಿಯೊಬ್ಬರ ಕಾಮೆಂಟ್​ಗೆ ಹಾಸ್ಯಮಯ ಪ್ರತಿಕ್ರಿಯೆ ನೀಡುವ ಮೂಲಕ ಆಸ್ಟ್ರೇಲಿಯಾದ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ ನಾಯಕ ಪ್ಯಾಟ್​ ಕಮ್ಮಿನ್ಸ್ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ.

    ಆಸಿಸ್​ನ ಸ್ಟಾರ್ ವೇಗಿ ತಮ್ಮ ಪತ್ನಿ ಬೆಕಿ ಕಮ್ಮಿನ್ಸ್ ಜತೆಗಿರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಪ್ರೇಮಿಗಳ ದಿನದ ಶುಭಕೋರಿದ್ದಾರೆ. ಫೋಟೋದಲ್ಲಿ ದಂಪತಿ ಬೀಚ್‌ನಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಸೂಪರ್​ ಮಮ್ಮಿ, ಪತ್ನಿ, ನನ್ನ ಪ್ರೇಮಿ ಮತ್ತು ಸರ್ಫರ್ ಕೂಡ ಹೌದು. ಹ್ಯಾಪಿ ವ್ಯಾಲಂಟೈನ್ಸ್​ ಡೇ ಬೆಕಿ ಕಮಿನ್ಸ್​ ಎಂದು ಫೋಟೋಗೆ ಕಮಿನ್ಸ್​ ಅಡಿಬರಹ ಬರೆದುಕೊಂಡಿದ್ದಾರೆ.

    ಕಮಿನ್ಸ್​ ಪೋಸ್ಟ್​ಗೆ ಕಾಮೆಂಟ್​ ಬಾಕ್ಸ್​ನಲ್ಲಿ ಕಾಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ. ಎಲ್ಲ ಕಾಮೆಂಟ್​ಗಳಿಗಿಂತ ಒರ್ವ ಅಭಿಮಾನಿ ಮಾಡಿರುವ ಕಾಮೆಂಟ್​ ಬಹಳ ಗಮನ ಸೆಳೆದಿದೆ. ನಾನು ಭಾರತೀಯ ನಾನು ನಿಮ್ಮ ಪತ್ನಿಯನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ. ಇದಕ್ಕೆ ಅಷ್ಟೇ ಸೊಗಸಾಗಿ ಕಮಿನ್ಸ್​ ಪ್ರತಿಕ್ರಿಯಿಸಿದ್ದು, ನಾನು ನಿಮ್ಮ ಸಂದೇಶವನ್ನು ಅವಳಿಗೆ ರವಾನಿಸುತ್ತೇನೆ ಎಂದಿದ್ದಾರೆ. ಸದ್ಯ ಈ ಕಾಮೆಂಟ್​ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.

    ಇನ್ನೂ 2023ರ ವರ್ಷವು ಕಮ್ಮಿನ್ಸ್‌ ಜೀವನದಲ್ಲೇ ಸ್ಮರಣೀಯವಾಗಿದೆ. ಏಕೆಂದರೆ, ಸ್ಟಾರ್ ವೇಗಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಎತ್ತಿಹಿಡಿಯಿತು. ತಮ್ಮ ಸಾಧನೆಗಾಗಿ ಕಮಿನ್ಸ್​ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಏಜೆನ್ಸೀಸ್​)

    ಮಗುವಿಗೆ ಜನ್ಮ ನೀಡಿ ಪರೀಕ್ಷೆಗೂ ಹಾಜರ್​! ಜಡ್ಜ್​ ಆಗಿ ನೇಮಕ, ಯುವತಿ ಸಾಧನೆಗೆ ತಲೆಬಾಗಿದ ಸರ್ಕಾರ

    ಗುಜರಾತಿನಲ್ಲಿ ನಾಪತ್ತೆ… 11 ವರ್ಷದ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts