ಕಿವೀಸ್​ ಎದುರು Team India ಸೋಲಲು CSK ಫ್ರಾಂಚೈಸಿ ಕಾರಣ ಎಂದ ಕನ್ನಡಿಗ; ಬಳಿಕ ನೀಡಿದ ವಿವರಣೆ ಹೀಗಿದೆ

Team India
Published on

ಬೆಂಗಳೂರು: ತವರಿನ ಆತಿಥ್ಯದಲ್ಲಿ ನಡೆದ ನ್ಯೂಜಿಲೆಂಡ್​ (NewZealand) ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವೈಟ್​ವಾಷ್​ ಆಗುವ ಮೂಲಕ ಟೀಮ್​ ಇಂಡಿಯಾ (Team India) ಭಾರೀ ಮುಖಭಂಗವನ್ನು ಅನುಭವಿಸಿದೆ. ಕೋಚ್​ ಆಗಿ ಗೌತಮ್​ ಗಂಭೀರ್​ (Gautam Gambhir) ಅವರು ಅಧಿಕಾರ ವಹಿಸಿಕೊಂಡ ಬಳಿಕ ಟೀಮ್​ ಇಂಡಿಯಾ (Team India) ಎರಡನೇ ಸರಣಿ ಸೋತಿದ್ದು, ಮಾಜಿ ಆಟಗಾರರು ಹಾದಿಯಾಗಿ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಹಿಟ್​ಮ್ಯಾನ್​ (Rohit Sharma) ಪಡೆಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಕನ್ನಡಿಗ ರಾಬಿನ್​ ಉತ್ತಪ್ಪ (Robin nUthappa) ಮಾತ್ರ ಭಾರತದ ಸೋಲಿಗೆ ಬೇರೊಂದು ಕಾರಣವನ್ನು ನೀಡಿದ್ದು, ಐಪಿಎಲ್​ ಫ್ರಾಂಚೈಸಿಯೊಂದನ್ನು (IPL Franchise) ದೂರಿದ್ದಾರೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ರಾಬಿನ್​ ಉತ್ತಪ್ಪ (Robin Uthappa), ನನ್ನ ಪ್ರಕಾರ ನ್ಯೂಜಿಲೆಂಡ್​ ಎದುರಿನ ಟೆಸ್ಟ್​ ಸರಣಿ ಸೋಲಿಗೆ​ ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ಕಾರಣ ಎಂದು ಹೇಳುತ್ತೇನೆ. ದೇಶದ ಹಿತಾಸಕ್ತಿಗಿಂತ ತನ್ನ ತಂಡದ ಆಟಗಾರರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿರುವ ಬಗ್ಗೆ ರಾಬಿನ ಉತ್ತಪ್ಪ (Robin Uthappa) ಕಿಡಿಕಾರಿದ್ದಾರೆ.

ನಾನು ನೋಡಿದಂತೆ ಚೆನ್ನೈ ಸೂಪರ್​ ಕಿಂಗ್ಸ್ (Chennai Super Kings) ಒಂದು ಅದ್ಭುತ ಫ್ರಾಂಚೈಸಿಯಾಗಿದ್ದು, ತನ್ನ ಆಟಗಾರರನ್ನು ಸದಾ ಬೆಂಬಲಿಸುತ್ತದೆ. ಆದರೆ, ಫ್ರಾಂಚೈಸಿಯು ದೇಶದ ಹಿತಾಸಕ್ತಿಗಿಂತ ತನ್ನ ತಂಡದ ಆಟಗಾರರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿರುವುದಕ್ಕೆ ನಮ್ಮ ಸಮ್ಮತ್ತಿಯಿಲ್ಲ. ದೇಶದ ಹಿತಾಸಕ್ತಿಗೆ ಸಂಬಂಧಿಸಿದಂತೆ, ಮಿತಿಯನ್ನು ನಿಗದಿಪಡಿಸುವ ಅವಶ್ಯಕತೆಯಿದೆ ಎಂದು ರಾಬಿನ್​ ಉತ್ತಪ್ಪ (Robin Uthappa) ಹೇಳಿದ್ದಾರೆ.

ಫ್ರಾಂಚೈಸಿಗಳು ತಮ್ಮ ಆಟಗಾರರಿಗಿಂತ ದೇಶಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ವಿಶೇಷವಾಗಿ ವಿದೇಶಿ ಆಟಗಾರರ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಭಾರತದ (Team India) ವಿರುದ್ಧ ಸರಣಿ ಆಡಲು ಇಲ್ಲಿಗೆ ಬಂದಿದ್ದ ಕಿವೀಸ್ ತಂಡದ ಆಟಗಾರನಿಗೆ ಅಭ್ಯಾಸ ಮಾಡಲು ಸಿಎಸ್‌ಕೆ ಅಕಾಡೆಮಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರ ಲಾಭ ಪಡೆದ ರಚಿನ್ ರವೀಂದ್ರ (Rachin Ravindra) ಮೊದಲ ಟೆಸ್ಟ್ ಪಂದ್ಯದಲ್ಲಿ 157 ಎಸೆತಗಳಲ್ಲಿ 134 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ರಚಿನ್ ಅವರ ಈ ಇನ್ನಿಂಗ್ಸ್‌ನಿಂದಾಗಿ ನ್ಯೂಜಿಲೆಂಡ್ ಭಾರಿ ಮುನ್ನಡೆ ಸಾಧಿಸಿದಲ್ಲದೆ, ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಮೊದಲ ಪಂದ್ಯದಲ್ಲೇ ಗೆಲುವಿನ ಸಾಧಿಸಿದರಿಂದ ಕಿವೀಸ್ ತಂಡದ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿತು. ಇದೇ ಆತ್ಮವಿಶ್ವಾಸದಲ್ಲಿ ಇಡೀ ಸರಣಿ ಆಡಿದ ಕಿವೀಸ್ ಐತಿಹಾಸಿಕ ಸರಣಿ ಗೆದ್ದುಕೊಂಡಿತು.

ಭಾರತಕ್ಕೆ ಬರುವ ಮೊದಲು, ಶ್ರೀಲಂಕಾ ಪ್ರವಾಸ ಮಾಡಿದ್ದ ನ್ಯೂಜಿಲೆಂಡ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿತ್ತು. ಮೊದಲ ಪಂದ್ಯದಲ್ಲಿ 154 ರನ್​ಗಳಿಂದ ಸೋತಿದ್ದ ಕಿವೀಸ್, ಎರಡನೇ ಪಂದ್ಯದಲ್ಲಿ 63 ರನ್​ಗಳಿಂದ ಸೋತಿತ್ತು. ಹೀಗಾಗಿ ಭಾರತಕ್ಕೆ ಬರುವ ಮುನ್ನ ಇಡೀ ತಂಡದ ಮನೋಬಲ ಕಡಿಮೆಯಾಗಿತ್ತು. ಆದರೆ ಸಿಎಸ್​ಕೆ ನೀಡಿದ ಅಭ್ಯಾಸದ ಆತಿಥ್ಯ ಕಿವೀಸ್ ಗೆಲುವಿಗೆ ಸಹಕಾರಿಯಾಯಿತು ಎಂದು ರಾಬಿನ್​ ಉತ್ತಪ್ಪ (Robin Uthappa) ಅಭಿಪ್ರಾಯಪಟ್ಟಿದ್ದಾರೆ.

ಟೀಮ್​ ಇಂಡಿಯಾ (Team India) ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ಸಿಎಸ್​ಕೆ ಫ್ರಾಂಚೈಸಿ (CSK Franchise), ರಚಿನ್ ರವೀಂದ್ರಗೆ (Rachin Ravindra) ಅಭ್ಯಾಸ ನಡೆಸಲು ಸೌಲಭ್ಯವನ್ನು ಒದಗಿಸಿಕೊಟ್ಟಿತ್ತು. ಭಾರತದ ನೆಲದಲ್ಲಿ ಅಭ್ಯಾಸ ನಡೆಸಿದ ಪರಿಣಾಮ ಇಲ್ಲಿನ ಸ್ಥಿತಿಗತಿಯನ್ನು ಚೆನ್ನಾಗಿ ಅರಿತುಕೊಂಡ ರಚಿನ್ ರವೀಂದ್ರ, ಇಡೀ ಸರಣಿಯಲ್ಲಿ ವೇಗಿಗಳ ಜೊತೆಗೆ ಸ್ಪಿನ್ನರ್​ಗಳನ್ನು ಸಮರ್ಥವಾಗಿ ಎದುರಿಸಿ ನ್ಯೂಜಿಲೆಂಡ್​ ಪರ ಗೆಲುವಿನ ಇನ್ನಿಂಗ್ಸ್​ಗಳನ್ನು ಆಡಿದ್ದರು.

ಉತ್ತಪ್ಪ (Robin Uthappa) ಮಾಡಿರುವ ಆರೋಪಕ್ಕೆ ಪುಷ್ಠಿ ಎಂಬಂತೆ ಮಾತನಾಡಿದ್ದ ರಚಿನ್​, ಸರಣಿ ಆರಂಭಕ್ಕೂ ಮುನ್ನ ಸಿಎಸ್​ಕೆ ಅಕಾಡೆಮಿಗೆ (CSK Academy) ಬಂದು ವಿವಿಧ ರೀತಿಯ ಪಿಚ್ ಹಾಗೂ ಬೌಲರ್​ಗಳ ವಿರುದ್ಧ ಅಭ್ಯಾಸ ನಡೆಸಿದ್ದು ನನಗೆ ಸಾಕಷ್ಟು ಸಹಕಾರಿಯಾಯಿತು ಎಂದು ರಚಿನ್​ ಹೇಳಿದ್ದರು. ಇಡೀ ಸರಣಿಯಲ್ಲಿ 51 ರ ಸರಾಸರಿಯಲ್ಲಿ 256 ರನ್ ಗಳಿಸಿ ಸರಣಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಎರಡನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net