ಮುಂಬೈ: (Sonakshi Sinha Pregnant ) ಸಿನಿಮಾ ನಟಿ, ನಟರಿಗೆ ಸಂಬಂಧಿಸಿದಂತೆ ಕೆಲವು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಈ ಸುದ್ದಿ ನೋಡಿ ಹಲವರಿಗೆ ಇದು ನಿಜ ಅನಿಸುತ್ತಿದೆ. ಆದರೆ ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಆಯಾ ನಟಿಯರು ಮತ್ತು ನಟರು ಸ್ಪಷ್ಟಪಡಿಸುವವರೆಗೂ ಅವು ವೈರಲ್ ಆಗುತ್ತಲೇ ಇರುತ್ತವೆ.
ಇತ್ತೀಚೆಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಜೂನ್ 2024 ರಲ್ಲಿ, ಅವರು ತಮ್ಮ ಗೆಳೆಯ, ನಟ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾದರು. ಸೋನಾಕ್ಷಿ ಗರ್ಭಿಣಿ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಕುರಿತಾಗಿ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.ತಾನು ಗರ್ಭಿಣಿ ಎಂಬ ಪ್ರಚಾರ ಸಂಪೂರ್ಣ ನಿರಾಧಾರ ಎಂದು ಹೇಳಿದ್ದಾರೆ.
ಸೋನಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಮಾಡಿದ ಕಾಮೆಂಟ್‌ಗಳ ಬಗ್ಗೆ ಕೋಪಗೊಂಡಿದ್ದಾರೆ ಮತ್ತು ಇನ್ನು ಮುಂದೆ ಇಂತಹ ವದಂತಿಗಳ ಬಗ್ಗೆ ಚರ್ಚೆ ಮಾಡಬೇಡಿ ಎಂದು ಕೇಳಿಕೊಂಡರು.
ತಾನು ಗರ್ಭಿಣಿಯಲ್ಲ , ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದು, ಅದಕ್ಕಾಗಿಯೇ ದಪ್ಪಗಿರುವೆ ಎಂದು ಹೇಳಿದ್ದಾರೆ. ಇಂತಹ ವದಂತಿಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ತೊಂದರೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
ಮದುವೆಯಾಗಿ ನಾಲ್ಕೇ ತಿಂಗಳಾಗಿದ್ದು, ಇನ್ನೂ ಸಂತೋಷದಿಂದ ಜೀವನ ಕಳೆಯುತ್ತಿದ್ದೇನೆ. ತನ್ನ ಕುಟುಂಬದೊಂದಿಗೆ ಶಾಂತಿಯುತವಾಗಿ ಸಮಯ ಕಳೆಯಲು ಬಯಸಿದಾಗ ಇಂತಹ ವದಂತಿಗಳು ವೈರಲ್ ಆಗುತ್ತಿರುವುದು ದುಃಖಕರವಾಗಿದೆ ಎಂದು ಅವರು ಹೇಳಿದರು.