More

    ನಾನು ಈ ಸಿನಿಮಾದಿಂದಲೇ ಪ್ರೆಗ್ನೆಂಟ್​ ಆದೆ! ನಾನೆಂದಿಗೂ ಅವರನ್ನು ಮರೆಯಲ್ಲ ಎಂದ ನಟಿ ಪೂರ್ಣಾ

    ಚೆನ್ನೈ: ನಟಿ ಪೂರ್ಣಾ ಅಲಿಯಾಸ್​ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು. ಜೋಶ್​, ರಾಧನ ಗಂಡ ಹಾಗೂ 100 ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಸಿದ್ದು, ಕೆಲವೇ ಸಿನಿಮಾಗಳಾದರೂ ಜೋಶ್​ ಸಿನಿಮಾದ ಯಶಸ್ಸು ಪೂರ್ಣಾರನ್ನು ಕನ್ನಡಿಗರಿಗೆ ಪರಿಚಯಿಸಿದೆ. ಇದೀಗ ಅವರು ಮುಂಬರುವ ತಮಿಳಿನ ಡೆವಿಲ್​ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

    ಡೆವಿಲ್​ ಸಿನಿಮಾವನ್ನು ಆದಿತ್ಯ ಎಂಬುವರು ನಿರ್ದೇಶಿಸಿದ್ದಾರೆ. ಆದಿತ್ಯ, ಖ್ಯಾತ ನಿರ್ದೇಶಕ ಮಿಸ್ಕಿನ್​ ಅವರ ಸಹೋದರ. ವಿಧಾರ್ಥ್​, ಪೂರ್ಣಾ, ಆದಿತ್ಯ ಅರುಣ್​, ಮಿಸ್ಕಿನ್​ ಮತ್ತು ಇತರೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಮಿಸ್ಕಿನ್​, ಸಂಗೀತ ಸಂಯೋಜನೆ ಸಹ ಮಾಡಿದ್ದಾರೆ.

    ಈ ಸಿನಿಮಾ ಫೆ.02ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಹಿನ್ನೆಲೆಯಲ್ಲಿ ನಟಿ ಪೂರ್ಣಾ ಟಿವಿ ಮತ್ತು ಯೂಟ್ಯೂಬ್​ ಚಾನೆಲ್​ಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಪೂರ್ಣಾ ಆಡಿದ ಮಾತುಗಳು ಎಲ್ಲರ ಗಮನ ಸೆಳೆದಿದೆ. ಡೆವಿಲ್​ ಸಿನಿಮಾ ಜತೆ ಪೂರ್ಣಾಗೆ ಭಾವನಾತ್ಮಕ ಸಂಬಂಧವಿದೆ.

    ನಾನು ಮಗುವಿಗೆ ಜನ್ಮ ನೀಡಲು ಡೆವಿಲ್​ ಸಿನಿಮಾ ಕಾರಣ. ನಾನು ಈ ಸಿನಿಮಾದಲ್ಲಿ ನಟನೆ ಮಾಡುವಾಗಲೇ ಪ್ರಗ್ನೆಂಟ್​ ಆದೆ. ಹೀಗಾಗಿ ಡೆವಿಲ್​ ಸಿನಿಮಾವನ್ನು ಮತ್ತು ಚಿತ್ರತಂಡದವರನ್ನು ನಾನೆಂದಿಗೂ ಮರೆಯುವುದಿಲ್ಲ. ಹಾಡಿನ ಚಿತ್ರೀಕರಣದ ವೇಳೆ ನನಗೆ ತಲೆ ಸುತ್ತುವ ಅನುಭವವಾಯಿತು. ಬಳಿಕ ವೈದ್ಯರಿಂದ ಪರೀಕ್ಷಿಸಿದಾಗ ನಾನು ಗರ್ಭಿಣಿ ಆಗಿರುವುದು ಖಚಿತವಾಯಿತು. ನಾನು ಪ್ರಗ್ನೆಂಟ್​ ಎಂಬುದು ಗೊತ್ತಾಗಿ ನನ್ನು ಎಲ್ಲರೂ ಚೆನ್ನಾಗಿ ನೋಡಿಕೊಂಡರು ಎಂದು ಪೂರ್ಣಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ಮದ್ವೆ ಹೆಸರಲ್ಲಿ ವಂಚನೆಗೊಳಗಾದ ಬಳಿಕ ಮದ್ವೆಗೆ ಬ್ರೇಕ್​ ಹಾಕಿದ್ದ ಜೋಶ್​ ನಟಿಗೆ ಕೂಡಿಬಂತು ಕಂಕಣ ಭಾಗ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts