

ಚೆನ್ನೈ: ತಮ್ಮ ಸಿಂಪ್ಲಿಸಿಟಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ಸಾಯಿ ಪಲ್ಲವಿ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ನಟನೆಯ ರಾಮಾಯಣ ಚಿತ್ರದ ಶೂಟಿಂಗ್ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಿದ್ದು, ಕೆಲ ದಿನಗಳ ಹಿಂದೆ ಶೂಟಿಂಗ್ ಸೆಟ್ನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಮಲಯಾಳಂನ ಸೂಪರ್ಹಿಟ್ ಚಲನಚಿತ್ರ ಪ್ರೇಮಂ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಲೆಕ್ಷರರ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಸೀರೆ ಹುಟ್ಟು ಹೆಚ್ಚು ಗಮನ ಸೆಳೆದಿದ್ದ ಅವರಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಆಫರ್ಗಳು ಹುಡುಕಿಕೊಂಡು ಬರಲು ಶುರು ಮಾಡಿದವು. ಆನ್ಸ್ಕ್ರೀನ್ ಮಾತ್ರವಲ್ಲೇ ತೆರಯ ಹಿಂದೆ ಕೂಡ ಸದಾ ಸೀರೆಯಲ್ಲಿ ಕಾಣುವ ನಟಿ ಈ ಬಗ್ಗೆ ಕಾರಣವನ್ನು ತಿಳಿಸಿದ್ದು, ಹಲವರು ಇದನ್ನು ಬೆಂಬಲಿಸಿದ್ದಾರೆ.
ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಈ ಕುರಿತು ಮಾತನಾಡಿದ ಸಾಯಿ ಪಲ್ಲವಿ, ನಾನು ಗಾರ್ಜಿಯಾದಲ್ಲಿ ಅಭ್ಯಾಸ ಮಾಡುತ್ತಿದೆ. ಆಗ ಟ್ಯಾಂಗೋ ಕಲಿತೆ. ಇದಕ್ಕೆ ಸಣ್ಣ ಬಟ್ಟೆ ತೊಡಬೇಕಿತ್ತು. ನಾನು ನನ್ನ ಪಾಲಕರಿಂದ ಒಪ್ಪಿಗೆ ಪಡೆದೆ. ಇದಕ್ಕೆ ಅವರು ಓಕೆ ಎಂದರು. ನಂತರ ನನ್ನ ನಟನೆಯ ಪ್ರೇಮಂ ರಿಲೀಸ್ ಆಯಿತು. ನನ್ನ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಆ ಬಳಿಕ ನನ್ನ ಟ್ಯಾಂಗೋ ಡ್ರೆಸ್ ವೈರಲ್ ಆಯಿತು. ಈ ವೇಳೆ ಜನರು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡದಿರು. ನನಗೆ ಅನ್ ಕಂಫರ್ಟೆಬಲ್ ಎಂದು ಅನಿಸಿತು.
ಆ ಘಟನೆ ಬಳಿಕ ನಾನು ಟ್ರೆಡಿಷನಲ್ ಆಗಿರಲು ಇಷ್ಟಪಟ್ಟೆ. ಏನೋ ಒಂದನ್ನು ಮಾಡಿ ನಂತರ ಕೊರಗುವುದು ನನಗೆ ಇಷ್ಟ ಇಲ್ಲ. ಬಟ್ಟೆಯನ್ನು ನೋಡಿ ಒಂದು ವ್ಯಕ್ತಿಯನ್ನು ಜಡ್ಜ್ ಮಾಡೋದು ಸರಿ ಅಲ್ಲ. ನಾನೇನು ಧರಿಸುತ್ತೇನೆ ಎಂಬುದು ನನ್ನ ವ್ಯಕ್ತಿತ್ವವನ್ನು ತೋರಿಸುವುದಿಲ್ಲ ಎಂದು ನಟಿ ಸಾಯಿ ಪಲ್ಲವಿ ತಾವು ಸದಾ ಟ್ರೆಡಿಷನಲ್ ಆಗಿ ಡ್ರೆಸ್ ಮಾಡಿಕೊಳ್ಳುವುದರ ಬಗ್ಗೆ ಹೇಳಿದ್ದಾರೆ.