ನನ್ನಂತೆ ನನ್ನ ಮಕ್ಕಳು ಕೂಡ… ಭಾರತದ ಬಗ್ಗೆ ಕೆವಿನ್​ ಪೀಟರ್ಸನ್​ ಹಿಂದಿಯಲ್ಲೇ ಮಾಡಿದ ಟ್ವೀಟ್ ವೈರಲ್​! Kevin Peterson

Kevin Peterson
Published on

ನವದೆಹಲಿ: ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ( Kevin Peterson ) ಭಾರತವನ್ನು ತುಂಬಾ ಗೌರವಿಸುವ ವ್ಯಕ್ತಿ. ಭಾರತದೊಂದಿಗಿನ ತನ್ನ ಬಾಂಧವ್ಯವನ್ನು ಯಾವಾಗಲೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ದೇಶವು ಉತ್ತಮವಾಗಿ ಬದಲಾಗುತ್ತಿದೆ ಮತ್ತು ಅತ್ಯಂತ ಪ್ರೀತಿಪಾತ್ರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳುತ್ತಿರುತ್ತಾರೆ.

ಇದೀಗ ಕುಟುಂಬ ಸಮೇತ ಪ್ರವಾಸಕ್ಕೆಂದು ಭಾರತಕ್ಕೆ ಬರುವುದಾಗಿ ಪೀಟರ್ಸನ್​ ಹೇಳಿಕೆ ನೀಡಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ತಮ್ಮ ಎಕ್ಸ್​ ಖಾತೆಯಲ್ಲಿ ಹಿಂದಿಯಲ್ಲೇ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ನಾನು ಮುಂದಿನ ವಾರ ನನ್ನ ಕುಟುಂಬದೊಂದಿಗೆ ಪ್ರವಾಸಕ್ಕೆಂದು ಭಾರತಕ್ಕೆ ಬರುತ್ತಿದ್ದೇನೆ. ನನ್ನ ನೆಚ್ಚಿನ ದೇಶಗಳಲ್ಲಿ ಒಂದಾದ ಭಾರತಕ್ಕೆ ಇದೇ ಮೊದಲ ಬಾರಿಗೆ ಕುಟುಂಬ ಸಮೇತ ಬರುತ್ತಿದ್ದೇನೆ. ಭಾರತಮಾತೆ ಮತ್ತು ಅವರ ಜನರನ್ನು ನನ್ನಂತೆಯೇ ನನ್ನ ಮಕ್ಕಳು ಕೂಡ ಪ್ರೀತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಕೆವಿನ್ ಪೀಟರ್ಸನ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಪೀಟರ್ಸನ್​ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತದ ಮೇಲಿನ ಅವರ ಪ್ರೀತಿಗೆ ಭಾರತೀಯರು ಫಿದಾ ಆಗಿದ್ದಾರೆ. ಅಲ್ಲದೆ, ಪೀಟರ್ಸನ್​ಗೆ ಭಾರತೀಯರು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net