VIDEO | ಹೃದಯಾಘಾತದಿಂದ ಜಿಮ್​ನಲ್ಲಿ ಮೃತಪಟ್ಟ ಕಾನ್​ಸ್ಟೇಬಲ್!

Police Man
Published on

ಆಂಧ್ರಪ್ರದೇಶ: ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಮೃತಪಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 24 ವರ್ಷದ ವಿಶಾಲ್ ಎಂಬಾತ ಸಾವನ್ನಪ್ಪಿರುವ ಕಾನ್​ಸ್ಟೇಬಲ್. ಜಿಮ್​ನಲ್ಲಿ ಪುಶ್​-ಅಪ್ ತೆಗೆಯುತ್ತಿರಬೇಕಾದರೆ ಹಠಾತ್ ಸಾವು ಸಂಭವಿಸಿದ್ದು, ಕುಸಿದು ಬಿದ್ದಿರುವ ವೀಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಇದೀಗ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ.

ಕಾನ್​ಸ್ಟೇಬಲ್ ವಿಶಾಲ್ ಹೈದರಾಬಾದ್​ನ ಆಸಿಫ್ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈರಲ್ ಆಗಿರುವ ವೀಡಿಯೋದಲ್ಲಿ ವಿಶಾಲ್ ಪುಶ್‌-ಅಪ್‌ ತೆಗೆಯುತ್ತಿದ್ದಾಗ ಕುಸಿದು ಬೀಳುವುದನ್ನು ಗಮನಿಸಬಹುದು. ಈ ವೇಳೆ ಜಿಮ್​ನಲ್ಲಿದ್ದ ಕೆಲ ಯುವಕರು ವಿಶಾಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದರು ಮೃತಪಟ್ಟಿರುವುದುನ್ನು ಖಚಿತ ಪಡಿಸಿದ್ದಾರೆ. ವಿಶಾಲ್ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net