ಹೈದರಾಬಾದ್​​ನಲ್ಲಿ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ: 10 ಮಂದಿ ಸೆರೆ

raped
Published on

ಹೈದರಾಬಾದ್​: ಹೈದರಾಬಾದ್​ನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದ್ದು, 10 ವರ್ಷದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿಸಲಾಗಿದ್ದು, ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಕಾರು ಚಾಲಕ ಚಕ್ಕೋಲು ನರೇಶ್ (26), ವಿಜಯ್ ಕುಮಾರ್ (23), ಬಾಲಾಜಿ (23), ಗುಡ್ಡಂತಿ ಕೃಷ್ಣ (22), ಕಿರಣ್ ಕುಮಾರ್ (26), ಬೊಳ್ಳೆಪೋಗು ಅಜಯ್ (23), ಜೇಮ್ಸ್ ಕ್ಸೇವಿಯರ್ (24), ದೀಪಕ್ (25), ಸಬವತ್ ಹತ್ಯಾ ನಾಯ್ಕ್ (25), ಇಂಜಮುರಿ ಮಧು (30) ಎಂದು ಗುರುತಿಸಲಾಗಿದೆ. ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.

ಅತ್ಯಾಚಾರ ಎಸಗಕ್ಕೂ ಮೊದಲು ಆರೋಪಿಗಳು ಸಂತ್ರಸ್ತೆಗೆ ಮತ್ತು ಬರುವ ಮಾದಕ ವಸ್ತು ತುಂಬಿದ ಪಾನೀಯವನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದು ಆ ಬಾಲಕಿ ಗರ್ಭಿಣಿಯಾಗಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಸ್ಕೂಟರ್, ದ್ವಿಚಕ್ರವಾಹನ ಸೇರಿದಂತೆ ಮೊಬೈಲ್, ವಾಹನಗಳು, ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೂನ್ 29 ರಂದು ಬಂಧಿತರಾಗಿರುವ ಎಲ್ಲಾ ಆರೋಪಿಗಳು ಅಪರಾಧ ಚಟುವಟಿಕೆಗಳು ಮತ್ತು ಮಾದಕ ದ್ರವ್ಯ ಸೇವನೆಯ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಪೈಶಾಚಿಕ ಕೃತ್ಯ ಎಸೆಗಿದ ಆರೋಪಿಗಳನ್ನು ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net