More

    ಅಶ್ಲೀಲ ಚಿತ್ರ ತೆಗೆದು ಧಮಕಿ ಹಾಕುತ್ತಿದ್ದ ಪತಿರಾಯನ ಕರಾಳ ಮುಖ ಬಿಚ್ಚಿಟ್ಟ ಪತ್ನಿ..!

    ಬೆಂಗಳೂರು: ಮೊಬೈಲ್​ನಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದ ಪತಿಯ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ.

    ಫ್ರೆಜರ್​ಟೌನ್​ನ ನಿವಾಸಿ 39 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ರಾಜು ಎಂಬಾತನ ವಿರುದ್ಧ ಪುಲಿಕೇಶಿನಗರ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

    ದೂರುದಾರ ಮಹಿಳೆ 2019 ಜ.10ರಂದು ರಾಜುನನ್ನು ವಿವಾಹವಾಗಿದ್ದರು. ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ನಂತರ ಪತಿ ರಾಜು ದಿನನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸುತ್ತಿದ್ದ. ಬೇರೆಯವರೊಂದಿಗೆ ಪತ್ನಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ಆಕೆಯ ಸಹೋದ್ಯೋಗಿಗಳಿಗೆ ಕರೆ ಮಾಡುತ್ತಿದ್ದ ರಾಜು, ನನ್ನ ಹೆಂಡತಿಗೂ ನಿಮಗೂ ಏನು ಸಂಬಂಧ ಎಂದು ಬೆದರಿಸುತ್ತಿದ್ದ. ಅಷ್ಟಕ್ಕೆ ಸುಮ್ಮನಾಗದ ಪತಿ, ಮೊಬೈಲ್​ನಲ್ಲಿ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸೆರೆಹಿಡಿದಿಟ್ಟುಕೊಂಡು ಅದನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿ ವಿಕೃತಿ ತೋರುತ್ತಿದ್ದ.

    ಆರೋಪಿ ಕುಡಿದು ಪತ್ನಿಗೆ ಮದ್ಯ ಹಾಗೂ ಸಿಗರೇಟ್ ತರುವಂತೆ ಪೀಡಿಸುತ್ತಿದ್ದ. ಮಗ ನನ್ನು ಕೊಲೆ ಮಾಡಿ, ನಿನ್ನ ತಂಗಿ ಮೇಲೆ ಅತ್ಯಾಚಾರ ಎಸಗುವುದಾಗಿ ಹೆದರಿಸುತ್ತಿದ್ದ, ಈ ಬಗ್ಗೆ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.

    ಪತಿಗೆ ಮೊದಲೇ ಮೂರು ವಿವಾಹ!

    ವಿವಾಹವಾದ ಬಳಿಕ ಮಹಿಳೆ ಗಂಡನಿಗೆ ಕಾರೊಂದನ್ನು ಉಡುಗೊರೆಯಾಗಿ ಕೊಡಿಸಿದ್ದರು. ಪತ್ನಿಗೆ ಗೊತ್ತಿಲ್ಲದಂತೆ ಆರೋಪಿ ಬೇರೆಯವರಿಗೆ ಆ ಕಾರು ಮಾರಾಟ ಮಾಡಿದ್ದ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜು, ದುಪ್ಪಟ್ಟದಿಂದ ಪತ್ನಿಯ ಕತ್ತನ್ನು ಬಿಗಿದು ಹತ್ಯೆ ಮಾಡಲು ಯತ್ನಿಸಿದ್ದ. ಪರಿಣಾಮ ಪತ್ನಿಗೆ ಉಸಿರುಗಟ್ಟಿ ಮಾತನಾಡಲು ಸಾಧ್ಯವಾಗದೇ ಕೈಕಾಲು ಒದರುತ್ತಿದ್ದಾಗ ಅಡುಗೆಮನೆಯಲ್ಲಿದ್ದ ವಸ್ತುಗಳು ಕಾಲಿಗೆ ಸಿಕ್ಕಿ ಕೆಳಗೆ ಬಿದ್ದು ಜೋರಾಗಿ ಶಬ್ದ ಉಂಟಾಗಿತ್ತು. ಶಬ್ದ ಕೇಳಿ ನೆರೆ-ಹೊರೆಯವರು ಅವರ ಮನೆಗೆ ಬಂದಿದ್ದರು. ಅವರನ್ನು ಕಂಡು ಆತಂಕಗೊಂಡ ಪತಿ, ಇವತ್ತು ನೀನು ಬದುಕಿದೆ. ಮುಂದೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ ಹೊರಟು ಹೋಗಿದ್ದ. ಪತಿ ಹಿನ್ನೆಲೆ ಕೆದಕಲು ಹೋದಾಗ ಈಗಾಗಲೇ ಆತನಿಗೆ 3 ಮದುವೆಯಾಗಿರುವ ಸಂಗತಿ ಬಹಿರಂಗಗೊಂಡಿತ್ತು. ಈ ವಿಚಾರವನ್ನು ತಿಳಿಸದೇ ನನ್ನನ್ನು ವಿವಾಹವಾಗಿ ಇದೀಗ ನನಗೂ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts