ಪತ್ನಿ ವಿರುದ್ಧವೇ ಪತಿ ಕೋರ್ಟ್​ಗೆ ಮೊರೆ!

untitled-design-3-690cdd5e0aebd
Published on

ಉಡುಪಿ: ಬ್ಯಾಂಕ್ ಲಾಕರ್​ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಗಮನಕ್ಕೆ ತರದೆ ಇನ್ನೊಂದು ಬ್ಯಾಂಕ್ ಲಾಕರ್​ನಲ್ಲಿಟ್ಟ ವಿಚಾರವಾಗಿ ಮಾರುತ್ ನಾರಾಯಣ ಪೈ ಎಂಬುವರು ಪತ್ನಿ ಲಕ್ಷ್ಮೀ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ಉಡುಪಿಯ ವಿಮಾ ಸಂಸ್ಥೆಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿರುವ ನಾರಾಯಣ ಪೈ ಅವರು ಪತ್ನಿ ಲಕ್ಷ್ಮೀ ಜತೆ ಮಾರುತಿ ವಿಥೀಕಾದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಲಾಕರ್ ಹೊಂದಿದ್ದರು. ಅದರಲ್ಲಿ ಒಟ್ಟು 870 ಗ್ರಾಂನ ವಿವಿಧ ಚಿನ್ನಾಭರಣ, ಚಿನ್ನ ಹಾಗೂ ಬೆಳ್ಳಿಯ ನಾಣ್ಯ, 5 ಲಕ್ಷ ರೂ. ಸ್ಥಿರ ಠೇವಣಿ ದಸ್ತಾವೇಜು ಹಾಗೂ ಮಣಿಪಾಲದಲ್ಲಿರುವ ಮನೆಯ ಮೂಲದಾಖಲಾತಿ ಪತ್ರಗಳನ್ನು ಇಟ್ಟಿದ್ದರು.

2020ರ ಆ.18ರಂದು ಪತ್ನಿ ಲಕ್ಷ್ಮೀ ಲಾಕರ್​ನಲ್ಲಿಟ್ಟಿದ್ದ ಎಲ್ಲ ಚಿನ್ನಾಭರಣ ಹಾಗೂ ದಾಖಲಾತಿ ಪತ್ರಗಳನ್ನು ತೆಗೆದು ಗದಗದ ಬ್ಯಾಂಕ್ ಶಾಖೆಯಲ್ಲಿ ಹೊಸ ಲಾಕರ್ ತೆರೆದು ಅಲ್ಲಿಟ್ಟಿದ್ದರು. ಈ ಬಗ್ಗೆ ನಾರಾಯಣ ಪೈ ಅವರಿಗೆ ಮಾಹಿತಿ ಸಿಕ್ಕಿದ್ದು, ಗಮನಕ್ಕೆ ತರದೆ ಪತ್ನಿ ಚಿನ್ನಾಭರಣ, ದಾಖಲೆಪತ್ರಗಳನ್ನು ತೆಗೆದá- ಮೋಸ ಮಾಡಿದ್ದಾಳೆ ಎಂದು ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net