ಪತಿ ಅಗಲಿಕೆ ಸುದ್ದಿ ಕೇಳಿ ಪ್ರಾಣ ಬಿಟ್ಟ ಪತ್ನಿ, ಸಾವಿನಲ್ಲೂ ಒಂದಾದ ವೃದ್ಧ ದಂಪತಿ..

chindwada couple
Published on

ಛಿಂದ್ವಾಡಾ: ಪತಿ ಸಾವಿನ ಸುದ್ದಿಯನ್ನು ಕೇಳಿಯು ಪತ್ನಿಯೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾಡಾ ಬಳಿ ನಡೆದಿದೆ.

ಗುಧಿ ಅಂಬಾಡದ ಪಾಲ ಚೌರಾಯಿ ಬಸ್ತಿ ನಿವಾಸಿ ಮುನ್ನಾಲಾಲ್ ವಿಶ್ವಕರ್ಮ ಶನಿವಾರ ರಾತ್ರಿ ಸ್ನೇಹಿತರ ಜತೆ ಕುಳಿತು ಹರಟೆ ಹೊಡೆಯುತ್ತಿದ್ದರು. ಸುಮಾರು 9.30ರ ಸುಮಾರಿಗೆ ಆತನ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ಆತನನ್ನು ಪರೀಕ್ಷಿಸಿದ ವೈದ್ಯರು, ಆತ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಇದಾದ ಬಳಿಕ ಮನೆಯವರು ಆತನ ಮೃತದೇಹದೊಂದಿಗೆ ಮನೆಗೆ ತಲುಪಿ ಈ ಮಾಹಿತಿಯನ್ನು ಆತನ ಪತ್ನಿ ಆಶಾಗೆ ತಿಳಿಸಿದ್ದು, ಪತಿಯನ್ನು ಆ ಸ್ಥಿತಿಯಲ್ಲಿ ನೋಡಿದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಮಕ್ಕಳು ತಮ್ಮ ತಾಯಿಯನ್ನು ಆಸ್ಪತ್ರೆ ಕರೆತಂದಿದ್ದು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಟೈರ್ ಮೈಮೇಲೆ ಬಿದ್ದು 2 ವರ್ಷದ ಮಗು ಸಾವು..

ಇನ್ನು ಈ ಸಾವಿನ ಸುದ್ದಿಯ ನಂತರ ಗ್ರಾಮಸ್ಥರು ಸಹ ಕಣ್ಣಿರು ಹಾಕಿದ್ದು, ಜೀವನ ಪರ್ಯಂತ ಜೊತೆಯಾಗಿಯೇ ಇರುತ್ತೇವೆ ಎಂದು ಶಪಥ ಮಾಡಿದ್ದ ಈ ಜೋಡಿಯನ್ನು ಸಾವು ಕೂಡ ಬೇರ್ಪಡಿಸಲು ಸಾಧ್ಯವಾಗಲಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net