Viral news | ಈ ಗಂಡ ಹಾಗೂ ಹೆಂಡತಿ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಲೇ ಇರುತ್ತವೆ. ಕೆಲ ಜಗಳಗಳು ಊಟ ಮಾಡಿ ಮಲಗುವುದರೊಳಗೆ ಶಮನಗೊಂಡರೆ, ಇನ್ನೂ ಕೆಲ ಜಗಳಗಳು ಅತೀರೇಕಕ್ಕೆ ತಿರುಗಿ ಬೀದಿಗೆ ಬಂದ ಘಟನೆಗಳು ಸಾಕಷ್ಟು ನಡೆದಿವೆ. ಅಂದಹಾಗೆ ಇಲ್ಲೊಂದು ಅಂತಹದ್ದೇ ಒಂದು ಘಟನೆ ನಡೆದಿದೆ. ಇಲ್ಲಿ ಪತಿ ಪತ್ನಿಯರಿಬ್ಬರೂ ನಡುರಸ್ತೆಯಲ್ಲೇ ಗುದ್ದಾಡಿಕೊಂಡಿದ್ದಾರೆ. ಇವರ ಈ ಗುದ್ದಾಟದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.

ಇದನ್ನೂ ಓದಿ: ಗೊಬ್ಬರ ಹಾಕಿದ ನೀರು ಕುಡಿದು 40 ಮೇಕೆಗಳು ಬಲಿ| Goats
ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಜಗಳ ಮಾಡುವ ಅದೆಷ್ಟೋ ದಂಪತಿಗಳನ್ನು ನಾವು ನೋಡಿದ್ದೇವೆ. ನಂತರ ಸಣ್ಣ ಪುಟ್ಟ ಮನಸ್ತಾಪಗಳು ಆರಂಭವಾಗಿ ಮಾತಿಗೆ ಮಾತಿಗೆ ಬೆಳೆದು ಹೊಡೆದಾಡಿಕೊಳ್ಳುವ ಹಂತಕ್ಕೂ ಕೆಲ ಜಗಳಗಳು ತಲುಪಿವೆ.
अब तो हर तरह से पुरुषों पे बड़ा अत्याचार हो रहा है 🤧 pic.twitter.com/NJtlAj5h4l
— Dr khatra 😉 (@dumbitpatra15) April 14, 2025
Dr khatra ಹೆಸರಿನ ಖಾತೆಯಲ್ಲಿ ಗಂಡ-ಹೆಂಡತಿಯರ ಜಗಳದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪತಿ ಸ್ಕೂಟರನ್ನು ರಸ್ತೆ ಪಕ್ಕ ನಿಲ್ಲಿಸಿದ್ದು, ಆ ನಂತರ ಈ ದಂಪತಿಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಪ್ರಾರಂಭದಲ್ಲಿ ಇಬ್ಬರು ಕೂದಲು ಹಿಡಿದು ಎಳೆದಾಡಿಕೊಳ್ಳುವ ಮೂಲಕ ಜಗಳ ಆರಂಭಿಸಿದ್ದಾರೆ. ಕೊನೆಗೆ ಈ ಜಗಳವು ಅತೀರೇಕಕ್ಕೆ ತಿರುಗಿ ಗಂಡನ ಮೇಲೆ ಕುಳಿತ ಪತ್ನಿ ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಇದನ್ನೂ ಓದಿ: 1ನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶ| Education
ಇನ್ನೂ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಪ್ರೇಕ್ಷಕರು ಒಬ್ಬೊಬ್ಬರೂ ಕೂಡ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಜಗಳ ನೋಡಿ ಮನಸ್ಸಿಗೆ ಬೇಸರವಾಯಿತು. ಆ ಗಂಡನನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ. ಮತ್ತೊಬ್ಬರು ಪುರುಷರು ಒಂದು ಕಾಲದಲ್ಲಿ ಮಹಿಳೆಯರನ್ನೇ ತುಂಬಾ ಹಿಂಸಿಸುತ್ತಿದ್ದರು ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಖೇಶ್ ಖನ್ನಾ ಅವರಿಗೆ ವಹಿಸಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.
(ಏಜೆನ್ಸೀಸ್)
1ನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶ| Education