

ಅಹಮದಾಬಾದ್: ಗುಜರಾತ್ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳದ) ಅಧಿಕಾರಿಗಳು ಮೂವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ದೇಶಾದ್ಯಂತ ಭಾರಿ ವಿಧ್ವಂಸಕ ಕೃತ್ಯಕ್ಕೆ ರೂಪಿಸಲಾಗಿದ್ದ ಸಂಚನ್ನು ವಿಫಲಗೊಳಿಸಿದ್ದಾರೆ. ಬಂಧಿತರನ್ನು ಹೈದರಾಬಾದ್ ನಿವಾಸಿ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್ (35), ಉತ್ತರ ಪ್ರದೇಶದ ಮೊಹಮ್ಮದ್ ಸುಹೇಲ್ (23) ಉತ್ತರ ಪ್ರದೇಶದ ಆಜಾದ್ ಸುಲೇಮಾನ್ ಶೇಖ್ (20) ಎಂದು ಗುರುತಿಸಲಾಗಿದೆ. ಹಲವು ದಿನಗಳಿಂದ ಇವರ ಮೇಲೆ ನಿಗಾ ಇಡಲಾಗಿತ್ತು. ಶಸ್ತ್ರಾಸ್ತ್ರ ಪೂರೈಸುತ್ತಿದ್ದಾಗ ಈ ಮೂವರನ್ನು ಬಂಧಿಸಲಾಗಿದೆ.
ಬಂಧಿಸಿದ್ದು ಹೇಗೆ?: ಮೊಹಿಯುದ್ದೀನ್ ಸೈಯದ್ ದಾಳಿಗೆ ಸಂಚು ರೂಪಿಸುತ್ತಿದ್ದು, ಇದರ ಭಾಗವಾಗಿ ಆತ ಅಹಮದಾಬಾದ್ಗೆ ಆಗಮಿಸಿದ್ದಾನೆಂಬ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು ಅಹಮದಾಬಾದ್-ಮೆಹ್ಸಾನಾ ಟೋಲ್ ಬಳಿ ಕಾರು ತಡೆದು ಸೈಯದ್ನನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಗ್ಲಾಕ್ ಪಿಸ್ತೂಲ್, ಒಂದು ಬೆರೆಟ್ಲಾ ಪಿಸ್ತೂಲ್, 30 ಲೈವ್ ಕಾಟಿರ್Åಡ್ಜ್ ವಶಕ್ಕೆ ಪಡೆಯಲಾಗಿದೆ. ಸೈಯದ್ನ ಮೊಬೈಲ್ ಕರೆ ವಿವರ ಆಧರಿಸಿ ಎಟಿಎಸ್ ಅಧಿಕಾರಿಗಳು ಆಜಾದ್ ಸುಲೇಮಾನ್, ಮೊಹಮ್ಮದ್ ಸುಹೇಲ್ನನ್ನು ಬಂಧಿಸಿದ್ದಾರೆ.
ಪಾಕ್ನಿಂದ ಶಸ್ತ್ರಾಸ್ತ್ರ: ಸುಲೇಮಾನ್ ಮತ್ತು ಸುಹೇಲ್ ಪಾಕಿಸ್ತಾನ ಡ್ರೋನ್ ಮೂಲಕ ಸಾಗಿಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ರಾಜಸ್ಥಾನದ ಹನುಮಾನ್ಗಢದಿಂದ ಸಾಗಿಸಿ ಸೈಯದ್ಗೆ ಒದಗಿಸಿದ್ದರು. ಆಪರೇಷನ್ ಸಿಂಧೂರ ಬಳೀಕ ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳು ಭಾರತದಲ್ಲಿ ಸರಣಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ ಎಂದು ಗುಪ್ತಚರ ಮಾಹಿತಿ ಲಭ್ಯ ವಾಗಿತ್ತು. ಇದರ ಬೆನ್ನಲ್ಲೇ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಉಗ್ರರಿಗೆ ಎಸ್1 ರಹಸ್ಯ ಘಟಕದಿಂದ ತರಬೇತಿ?: ಭಾರತದ ವಿರುದ್ಧ ದಾಳಿ ನಡೆಸುವ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ರಹಸ್ಯ ಘಟಕವಾದ ಎಸ್ 1 (ಸಬ್ವರ್ಷನ್ - 1) ತರಬೇತಿ ನೀಡುತ್ತಿದೆ. ಪಾಕಿಸ್ತಾನ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿ ಎಸ್ 1 ಮುಖ್ಯಸ್ಥನಾಗಿದ್ದು, ಗಾಝಿ 1 ಮತ್ತು ಗಾಝಿ 2 ಎಂಬ ಕೋಡ್ ನೇಮ್ ಇಬ್ಬರು ಅಧಿಕಾರಿಗಳು ಉಗ್ರರಿಗೆ ತರಬೇತಿ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ತಿಳಿದು ಬಂದಿದೆ. ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎಸ್1 ಘಟಕದ ಪ್ರಧಾನ ಕಚೇರಿ ಇಸ್ಲಾಮಾಬಾದ್ನಲ್ಲಿ ಇದ್ದು, ಮಾದಕ ವಸ್ತುವಿನ ಹಣದಿಂದ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸಲಾಗುತ್ತಿದೆ. ಎಸ್ 1ರ ಸಿಬ್ಬಂದಿ ಮತ್ತು ತರಬೇತುದಾರರು ಎಲ್ಲಾ ವಿಧದ ಬಾಂಬ್ ಮತ್ತು ಸುಧಾರಿಕ ಸ್ಪೋಟಕ ಸಾಧನ ತಯಾರಿಸುವಲ್ಲಿ ಪರಿಣತರಾಗಿದ್ದು, ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆ. ಈ ಘಟಕ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೈಯದ್, ಗುಜರಾತ್ನ ಕಲೋಲ್ ಬಳಿಯ ನಿರ್ಜನ ಪ್ರದೇಶದಲ್ಲಿ ರಾಸಾಯನಿಕ ಅಸ್ತ್ರ ತಯಾರಿಸಲು ಕಚ್ಚಾ ಸಾಮಗ್ರಿ ಖರೀದಿಸಿದ್ದ. ಇದರಿಂದ ಆತ ‘ರಿಸಿನ್’ ಎಂದ ಮಾರಕ ವಿಷ ತಯಾರಿಸಲು ಸಿದ್ಧತೆ ನಡೆಸುತ್ತಿದ್ದ, ಇದಕ್ಕೆ ಪೂರಕವಾಗಿ ಅಗತ್ಯ ಸಂಶೋಧನೆ ನಡೆಸಿದ್ದ. ಕೆಲವೊಂದು ರಾಸಾಯನಿಕ ಸಂಗ್ರಹಿಸಿ ಸಂಸ್ಕರಣೆ ಆರಂಭಿಸಿದ್ದ. ಚೀನಾದಿಂದ ಎಂಬಿಬಿಎಸ್ ಪದವಿ ಪಡೆದಿರುವ ಈತ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ (ಐಎಸ್ಕೆಪಿ) ಸಂಘಟನೆ ಜತೆ ಸಂಪರ್ಕ ಹೊಂದಿರುವ ಆಫ್ಘನ್ ಪ್ರಜೆ ಜತೆ ಜತೆಗೆ ಪಾಕಿಸ್ತಾನದ ಹಲವು ಪ್ರಜೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಿಮಾನಗಳನ್ನು ಪತನಗೊಳಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎಂಬ ವಿಚಾರ ಸದ್ದು ಮಾಡಿದೆ. ದೆಹಲಿ ಯಿಂದ 60 ನಾಟಿಕಲ್ ಮೈಲು ವ್ಯಾಪ್ತಿಯೊಳಗೆ ಸಂಚರಿಸುವ ವಿಮಾನಗಳಿಗೆ ತಪ್ಪಾದ ಡೇಟಾ ಜತೆ ವಿಮಾನ ಲ್ಯಾಂಡ್ ಆಗುವ ಸ್ಥಳದ ತಪು್ಪ ಮಾಹಿತಿ ಪೂರೈಕೆಯಾಗಿದೆ. ಜಿಪಿಎಸ್ ನಿಯಂತ್ರಿಸುವ ಮೂಲಕ ವಿಮಾನಗಳಿಗೆ ತಪು್ಪ ಮಾಹಿತಿ ರವಾನಿಸಿರ ಬಹುದೆಂದು ಪೈಲಟ್ಗಳು ಮತ್ತು ವಾಯು ಸಂಚಾರ ನಿಯಂತ್ರಕರ ಹೇಳಿಕೆ ಆಧರಿಸಿ ವರದಿ ಮಾಡಲಾಗಿದೆ.
ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನಗಳನ್ನು ತಪು್ಪ ದಾರಿಗೆ ಕೊಂಡೊಯ್ಯುವ ಸಂಚು ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ. ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿರುವ ವರದಿಯಲ್ಲಿ ಪೈಲಟ್ ಒಬ್ಬರು ಕಳೆದ ವಾರ ತಾವು ಕಾರ್ಯನಿರ್ವಹಿಸಿದ 6 ವಿಮಾನಗಳಲ್ಲಿ ತಪ್ಪಾದ ಮಾಹಿತಿ ಪೂರೈಕೆಯಾಗಿದೆ ಎಂದು ತಿಳಿಸಿದ್ದಾರೆ. ಲ್ಯಾಂಡಿಂಗ್ ಆಗುವಾಗ ಮಾರ್ಗ ಸ್ಪಷ್ಟವಾಗಿದ್ದರೂ ವಿಮಾನದಲ್ಲಿರುವ ವ್ಯವಸ್ಥೆ ಭೂಪ್ರದೇಶದ ಕುರಿತು ಎಚ್ಚರಿಕೆ ನೀಡಿದೆ. ಟೇಕ್ ಆಫ್ ಸಮಯದಲ್ಲೂ ಸಹ ಈ ರೀತಿಯ ಅಡಚಣೆಗಳು ಕಾಣಿಸಿಕೊಂಡಿವೆ. ಹಾಗಾಗಿ ಪೈಲಟ್ಗಳು ವಾಯು ಸಂಚಾರ ನಿಯಂತ್ರಕರ ಮಾರ್ಗದರ್ಶನ ಆಧರಿಸಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದೆ.