ಸಾಮಾಜಿಕ, ಧಾರ್ಮಿಕ ಕಾರ್ಯದಿಂದ ಲಭಿಸಲಿದೆ ಮಾನಸಿಕ ನೆಮ್ಮದಿ

GOSHTI
ಅಳವಂಡಿ ಶ್ರೀ ಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ದೇವಪ್ಪ, ನಾಗಪ್ಪ, ಚಿಕ್ಕವೀರಯ್ಯ, ಭೀಮರಡ್ಡಿ, ಅಶೋಕ, ಶಿವಪ್ಪ, ಗೀರಿಶ, ರಮೇಶ, ನೀಲಪ್ಪ ಇದ್ದರು.
Published on

ಅಳವಂಡಿ: ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಹೆಸರು ತಂದು ಕೊಡಲಿದೆ. ನಮ್ಮ ಶಕ್ತಿಯನ್ನು ಒಳ್ಳೆಯ ಆಲೋಚನೆ ಹಾಗೂ ಕೆಲಸಗಳಿಗೆ ವಿನಿಯೋಗಿಸಿದಾಗ ಯಶಸ್ಸು ಹೊಂದಲು ಸಾಧ್ಯ ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಗ್ರಾಮದ ಶ್ರೀ ಸಿದ್ದೇಶ್ವರ ಮಠದಲ್ಲಿ ಅಮಾವಾಸ್ಯೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ 15ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿ, ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಹೇಳಿದರು.

ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ. ವ್ಯಕ್ತಿ ಅಂದರೆ ಚಿನ್ನ. ವ್ತಕ್ತಿತ್ವ ಅಂದರೆ ಆಭರಣ. ಮನುಷ್ಯ ಚಿನ್ನವಾಗುವ ಬದಲು, ಆಭರಣವಾದರೆ ಆತನ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಈ ಜಗತ್ತು ಶಿವನ ಕಕ್ಷೆಯಲ್ಲಿದ್ದು, ನಾವು ಶಿವನ ರಕ್ಷೆಯಲ್ಲಿದ್ದೇವೆ. ಮನುಷ್ಯ ಇನ್ನೊಬ್ಬರಿಗೆ ಉಪಯೋಗವಾಗುವಂತಹ ಜೀವನ ನಡೆಸಬೇಕು. ಮನುಷ್ಯನ ಜೀವನ ಕ್ಷಣಿಕ. ಹಣ, ಯಶಸ್ಸು ಸಿಕ್ಕಾಗ ಒಳ್ಳೆಯ ಆಲೋಚನೆ ಮಾಡಿ ಹೆಚ್ಚಿನ ಕೀರ್ತಿ ಪಡೆಯಬಹುದು ಎಂದರು.

ಪ್ರಮುಖರಾದ ದೇವಪ್ಪ ಕಟ್ಟಿಮನಿ, ನಾಗಪ್ಪ ಸವಡಿ, ಚಿಕ್ಕವೀರಯ್ಯ ಕವಡಿಮಟ್ಟಿ, ಭೀಮರಡ್ಡಿ ಗದ್ದಿಕೇರಿ, ಅಶೋಕ ಬಂಡಿ, ಶಿವಪ್ಪ ಬಣಗಾರ, ಗೀರಿಶ ಕಣವಿ, ರಮೇಶ ಭಾವಿಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net