

ಗಂಗೊಳ್ಳಿ: ಎಲ್ಲ ಜನ್ಮಗಳಲ್ಲಿ ಪುಣ್ಯ ಮಾಡಿ ಪಾಪದಿಂದ ಮುಕ್ತನಾಗಿ, ಪರಿಶುದ್ಧನಾದಾಗ ಮನುಷ್ಯ ಜನ್ಮ ಪಡೆಯುತ್ತಾನೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ಭಗವಂತನ ಭಜನೆ ಮಾಡಬೇಕು, ಜನಹಿತ ಕಾರ್ಯ ಮಾಡುತ್ತಿರಬೇಕು ಎಂದು ತಾಳಗುಪ್ಪ ಪ್ರಣವ ಪೀಠ ಕೂಡ್ಲಿ ಬಾರಂಗಿ ಮಹಾಸಂಸ್ಥಾನ ಮಠದ ವಿದ್ವಾನ್ ಶ್ರೀ ಸಿದ್ಧವೀರ ಸ್ವಾಮೀಜಿ ಹೇಳಿದರು.
ಕುಂದಾಪುರ ತಾಲೂಕಿನ ನಾಯಕವಾಡಿ-ಗುಜ್ಜಾಡಿ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ಸುವರ್ಣ ಮಹೋತ್ಸವ ಸುವರ್ಣ ಸಂಗಮವನ್ನು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ರಾಮ ನಾಯ್ಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಮತ್ಸೊೃೀದ್ಯಮಿ ಮಂಜುನಾಥ ಜಿ.ಟಿ., ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಶ್ರೀ ಸಂಗಮೇಶ್ವರ ದೇವಸ್ಥಾನ ಅಧ್ಯಕ್ಷ ರಘುರಾಮ ಟಿ., ಮೊಕ್ತೇಸರ ಚಂದ್ರಕಾಂತ ಕೆ., ಅಂಗನವಾಡಿ ಶಿಕ್ಷಕಿ ನಿರೀಕ್ಷಾ, ಸಂಸ್ಥೆ ಗೌರವಾಧ್ಯಕ್ಷ ರವೀಂದ್ರ ಟಿ., ಪ್ರ.ಕಾರ್ಯದರ್ಶಿ ನಿತೇನ್ ಎನ್.ಡಿ. ಮತ್ತಿತರರು ಉಪಸ್ಥಿತರಿದ್ದರು.
ಯುವಕ ಮಂಡಲ ಅಧ್ಯಕ್ಷ ಶ್ರೀಧರ ಎನ್. ಸ್ವಾಗತಿಸಿ, ಗೌರವ ಸಲಹೆಗಾರ ರಾಜು ಎನ್.ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾ ಕೊಡೇರಿ ಸ್ಮರಣ ಸಂಚಿಕೆ ಕುರಿತು ಮಾತನಾಡಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.
ಜಾತಿ, ಧರ್ಮಗಿಂತ ನನ್ನ ದೇಶ ಮುಖ್ಯ ಎನ್ನುವ ಹೃದಯ ತುಂಬಿರುವ ಸಮಾಜ ನಿರ್ಮಾಣವಾದರೆ, ಆ ಸಮಾಜದಲ್ಲಿ ಒಂದು ಕುಟುಂಬದಂತೆ ಬದುಕಲು ಸಾಧ್ಯ. ಜನರು ಮುಖ್ಯವಾಹಿನಿಗೆ ಬಂದಾಗ ಶಕ್ತಿಯಾಗಿ ಯುಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. -ಕೋಟ ಶ್ರೀನಿವಾಸ ಪೂಜಾರಿ ಸಂಸದ https://www.vijayavani.net/sham-wins-first-place-at-the-district-level https://www.vijayavani.net/anniversary-inauguration-of-auditorium