ಮಾನವೀಯ ಕಾಳಜಿಯನ್ನು ದೇವರ ಸಾನಿಧ್ಯ ಕಾಣಬಹುದು

kota (1)
Published on

ಕೋಟ: ಸವಾಜದ ಕಟ್ಟ ಕಡೆಯ ಕೊರಗ ಕಾಲೋನಿಯಲ್ಲಿ ಸುಸರ್ಜಿತ ಮನೆ ನಿರ್ಮಿಸಿ ಕೊಡುವ ಕೋಟತಟ್ಟು ಗ್ರಾಮ ಪಂಚಾಯಿತಿನ ಕಾರ್ಯ ನಿಜಕ್ಕೂ ದೇವರ ಪೂಜೆಗೆ ಸವಾನ ಎಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಅಭಿಪ್ರಾಯಪಟ್ಟರು.

ಕೋಟತಟ್ಟು ಗ್ರಾಮ ಪಂಚಾಯಿತಿನ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಮನೆ ನಿರ್ಮಿಸುವ ಕಾರ್ಯಕ್ಕೆ ದೇವಸ್ಥಾನದ ವತಿಯಿಂದ ಎರಡು ಲಕ್ಷ ಚೆಕ್ ವಿತರಿಸಿ ವಾತನಾಡಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಅವರು ಪಂಚಾಯಿತಿ ಪರವಾಗಿ ಆಡಳಿತ ಮಂಡಳಿಗೆ ಧನ್ಯವಾದ ಸಮರ್ಪಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಗಣೇಶ್ ಮೂರ್ತಿ ನಾವಡ, ಸದಸ್ಯರಾದ ಅನಂತ ಪದ್ಮನಾಭ ಐತಾಳ್, ಚಂದ್ರಶೇಖರ್ ಉಪಾಧ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಪಂ ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ ವಿದ್ಯಾ ಪಿ.ಸಾಲಿಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net