ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಅಗತ್ಯ: ಬಿ ಬಿ ಪಾಟೀಲ

15GDG06
Published on

ಗದಗ: ಇಂದಿನ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಕನ್ನಡ ನಾಡು ನುಡಿಯ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಬಿ ಬಿ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಜರುಗಿದ ಕಲಾ ವಿಭಾಗದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಕುರಿತು ಉಪನ್ಯಾಸ ನೀಡಿದರು ಅಲ್ಲದೆ ಅನೇಕ ಕವಿಗಳು ಲೇಖಕರು ಮೌಲ್ಯಯುತವಾದ ಕಾವ್ಯ ಕೃತಿಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ತಿಳಿಸಿದರು ಮತ್ತು ವಿದ್ಯಾರ್ಥಿಗಳು ಹನಿಗವನ ಚುಟುಕು ಮುಂತಾದವುಗಳನ್ನು ರಚಿಸುವ ಮೂಲಕ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪ ಪ್ರಾಚಾರ್ಯರಾದ ಶ್ರೀ ಎಸ್ ಜಿ. ಉಳಿಗೇರ ರವರು ಮಾತನಾಡಿ ವಿದ್ಯಾರ್ಥಿಗಳು ಓದುಗಾರಿಕೆಯೊಂದಿಗೆ ಉತ್ತಮ ಹವ್ಯಾಸಗಳನ್ನು ಹೊಂದಿ ಸಾಧನೆಗೈಯಲು ತಿಳಿಸಿದರು. ಉಪನ್ಯಾಸಕರಾದ ಶ್ರೀ ಶಶಿಕಾಂತ ಕೊರ್ಲಹಳ್ಳಿ ಮಾತನಾಡಿ ಮಹಾವಿದ್ಯಾಲಯದ ನೀತಿ ನಿಯಮಗಳನ್ನು ವಿದ್ಯಾರ್ಥಿಗಳು ಪಾಲಿಸಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಆದರ್ಶ ವಿದ್ಯಾರ್ಥಿಗಳಾಗಲು ತಿಳಿಸಿದರು ಡಾ.ಎಸ್ ಎಂ. ಮಡಿವಾಳರ ವಿದ್ಯಾರ್ಥಿಗಳಿಗೆ ಹಿತನುಡಿ ತಿಳಿಸಿ ಶುಭ ಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಲ್ ಎಸ್ ಪಾಟೀಲರು ವಿದ್ಯಾರ್ಥಿಗಳ ಜವಾಬ್ದಾರಿಗಳನ್ನು ತಿಳಿಸಿ ಸತತ ಅಧ್ಯಯನ ಶೀಲರಾಗಿ ಸಾಧನೆ ಗೈದು ಮಹಾವಿದ್ಯಾಲಯಕ್ಕೆ ಕೀರ್ತಿ ತರಲು ತಿಳಿಸಿದರು ಕಾರ್ಯಕ್ರಮವನ್ನು ಕುಮಾರಿ ಶ್ರೀದೇವಿ ಕುರಿ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು ಸ ಸಾಂಸ್ಕೃತಿಕ ವೇದಿಕೆಯ ಕಾರ್ಯಾಧ್ಯಕ್ಷರಾದ ಶ್ರೀ ಎಮ್ ಡಿ ಮಾದರವರು ಸ್ವಾಗತಿಸಿದರು ಕುಮಾರ್ ಬಸವರಾಜ ಎಂ ತಳವಾರ ಪುಷ್ಪಾರ್ಪಣೆ ಕಾರ್ಯಕ್ರಮ ನಡೆಸಿದರು ಕುಮಾರಿ ಭಾಗ್ಯ ಎ ನಿರೂಪಿಸಿದರು ಕೊನೆಗೆ ಕುಮಾರ್ ಬಸವರಾಜ ಕೆ ತಳವಾರ ವಂದಿಸಿದರು ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶೋಭೆ ತಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net