ಚೈತನ್ಯ ಕೋಟೆಗೆ ಅವಳಿ ಚಿನ್ನದ ಪದಕ : ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ಸಾಧನೆ

New Project (27)
Published on

ಸುಬ್ರಹ್ಮಣ್ಯ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ವಿದುಷಿ ಚೈತನ್ಯ ಕೋಟೆ ವಿ.ವಿಗೆ ಪ್ರಥಮ ರ‌್ಯಾಂಕ್ ಗಳಿಸಿ ಅವಳಿ ಚಿನ್ನದ ಪದಕ ಪಡೆದಿದ್ದಾರೆ.

ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನವ ದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶ್ರೀನಿವಾಸ್ ವರಖೇಡಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಉಪಸ್ಥಿತರಿದ್ದರು.

ಚೈತನ್ಯ ಕೋಟೆ ವಿದುಷಿ ಅಂಶುಮಾಲ ಉಬರಡ್ಕ ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಅವರ ಶಿಷ್ಯೆ. ಕುಕ್ಕೆ ಸುಬ್ರಹ್ಮಣ್ಯದ ಬೂದಿಪಳ್ಳ ಭಾಸ್ಕರ ಕೋಟೆ ಮತ್ತು ವೀಣಾ ಕೋಟೆ ದಂಪತಿಯ ಪುತ್ರಿ. ತಿರುಮಲ ಭಟ್ ಅವರ ಪತ್ನಿ. ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಹಳೇ ವಿದ್ಯಾರ್ಥಿನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net