ಬೆಂಗಳೂರು: ಹೆಗ್ಗನಹಳ್ಳಿಯಲ್ಲಿರುವ ಆರ್‌ಎನ್‌ಎಸ್ ಎಜುಕೇಶನ್ ಟ್ರಸ್ಟ್‌ನ ನಿಸರ್ಗ ಹೈಸ್ಕೂಲ್‌ನಲ್ಲಿ ಭಾನುವಾರ ವಾರ್ಷಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ನಿಸರ್ಗ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡರು.
ವಿವಿಧ ಕ್ರೀಡಾ ಸ್ಪರ್ದೆಗಳ ನಂತರ ನಡೆದ ನಿಸರ್ಗ ಕ್ರೀಡೋತ್ಸವ ಸಮಾರಂಭವನ್ನು ಬೆಂಗಳೂರು ಉತ್ತರ ವಲಯದ ಡಿಡಿಪಿಐ ಕೆ.ಜಿ.ಅಂಜನಪ್ಪ ಹಾಗೂ ಮನೋವೈದ್ಯ ಡಾ.ಟಿ.ಎನ್.ಅಂಜನಪ್ಪ ಉದ್ಘಾಟಿಸಿದರು. ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಕೃಷ್ಣೇಗೌಡ, ಅನಿಲ್, ಹೆಗ್ಗನಹಳ್ಳಿ ಕ್ಲಸ್ಟರ್ ಸಿ.ಆರ್.ಪಿ ಎಸ್.ಜಿ.ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಗಣ್ಯರ ಮೆಚ್ಚುಗೆ ಪಡೆಯಿತು. ಮಕ್ಕಳಿಂದ ಹಾಡು, ನೃತ್ಯ, ವೀರಗಾಸೆ, ಪಟದ ಕುಣಿತ, ಭರತ ನಾಟ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ ರೂಪಕಗಳು ಎಲ್ಲರ ಗಮನ ಸೆಳೆದವು. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಎಚ್.ಎನ್.ಗಂಗಾಧರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಶಾಲಾ ಅಭಿವೃದ್ಧಿಗೆ ಸಹಕರಿಸುತ್ತಿರುವ ಕೆಲ ಪೋಷಕರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮಾ.14ರಿಂದ ಬೆಂಗಳೂರಿನಲ್ಲಿ ಕೈಮಗ್ಗ ಸೀರೆ ಉತ್ಸವ; ಶುಭ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜನೆ