ಹೃತಿಕ್ ರೋಷನ್ ಮಾಜಿ ಪತ್ನಿಗೆ ಎಷ್ಟು ಕೋಟಿ ಜೀವನಾಂಶ ನೀಡಿದ್ದಾರೆ ಗೊತ್ತಾ? ಇದು ಅತ್ಯಂತ ದುಬಾರಿ ವಿಚ್ಛೇದನ...

hrithik roshan
Published on

ಮುಂಬೈ: ಬಾಲಿವುಡ್ ಹೀರೋ ಹೃತಿಕ್ ರೋಷನ್ ಕಳೆದ ಕೆಲವು ವರ್ಷಗಳಿಂದ ತಮ್ಮ ಚಿತ್ರಗಳಿಗಿಂತ ತಮ್ಮ ವೈಯಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೃತಿಕ್ ತನ್ನ ಮಾಜಿ ಪತ್ನಿ ಸುಸ್ಸಾನೆ ಖಾನ್‌ನಿಂದ ವಿಚ್ಛೇದನದ ನಂತರ ಬಾಲಿವುಡ್ ಗಾಯಕ ಸಬಾ ಆಜಾದ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. 

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ದಂಪತಿಗೆ ಒಳ್ಳೆಯ ಫಾಲೋಯಿಂಗ್ ಇದೆ. ಆದರೆ ಈ ಹಿಂದೆ ವಿಚ್ಛೇದನವನ್ನು ಘೋಷಿಸಿದಾಗ ಅಭಿಮಾನಿಗಳು ಶಾಕ್ ಆಗಿದ್ದರು. ಹೃತಿಕ್ ರೋಷನ್ ಬಹುಕೋಟ್ಯಾಧಿಪತಿ. ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ವಿಚ್ಛೇದನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಹೃತಿಕ್ ರೋಷನ್ ಮತ್ತು ಸುಸಾನೆ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ವಿಚ್ಛೇದನವು ಆ ಸಮಯದಲ್ಲಿ ಬಾಲಿವುಡ್ ಉದ್ಯಮದಲ್ಲಿ ಅತ್ಯಂತ ದುಬಾರಿ ವಿಚ್ಛೇದನವಾಗಿತ್ತು. ವಿಚ್ಛೇದನದ ನಂತರ ಅವರು ತಮ್ಮ ಮಾಜಿ ಪತ್ನಿ ಸುಸ್ಸಾನೆ ಖಾನ್‌ಗೆ 400 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳು ಹೃತಿಕ್ ರೋಷನ್‌ನಿಂದ ಸುಸೇನ್ ಖಾನ್ ಜೀವನಾಂಶವಾಗಿ 400 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿತ್ತು. ಇಷ್ಟು ದೊಡ್ಡ ಭತ್ಯೆಯನ್ನು ಸುಸೇನ್ ಪಡೆದಿದ್ದಾರಾ ಎನ್ನುವ ಪ್ರಶ್ನೆ ಕೂಡಾ ಮುನ್ನೆಲೆಗೆ ಬಂದಿದೆ.ಜೀವನಾಂಶವಾಗಿ ಯಾವುದೇ ಮೊತ್ತವನ್ನು ತೆಗೆದುಕೊಂಡಿಲ್ಲ ಎಂದು ಸುಸೇನ್ ಖಾನ್ ಎನ್ನಲಾಗಿದೆ.

ಸುಸ್ಸಾನೆ ಖಾನ್ ಮತ್ತು ಹೃತಿಕ್ ರೋಷನ್ ವಿಚ್ಛೇದನವು ಬಾಲಿವುಡ್‌ನಲ್ಲಿ ಅತ್ಯಂತ ದುಬಾರಿಯಾಗಿದೆ ಎಂಬ ಮಾತು ಇನ್ನೂ ಇದೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net