ವೇದಿಕ್ ಕೌಶಲ್‌ಗೆ ಹೊಯ್ಸಳ ಪ್ರಶಸ್ತಿ

32
Published on

ಕಡಬ: ಕಲೆ ಸಾಂಸ್ಕೃತಿಕ, ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ ವೇದಿಕ್ ಕೌಶಲ್ ಅವರಿಗೆ 2024-25ನೇ ಸಾಲಿನ ದ.ಕ. ಜಿಲ್ಲಾಮಟ್ಟದ ಹೊಯ್ಸಳ ಪ್ರಶಸ್ತಿ ಲಭಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದೆ. ಬಲ್ಯ ಗ್ರಾಮದ ಮಹದೇವಪ್ಪ, ವಾಳ್ಯ ಸ.ಕಿ.ಪ್ರಾ.ಶಾಲೆ ವಾಳ್ಯದಲ್ಲಿ ಶಿಕ್ಷಕಿಯಾಗಿರುವ ಮಂಜುಳ ಯು.ಎಂ., ದಂಪತಿ ಪುತ್ರನಾಗಿರುವ ವೇದಿಕ್ ಕೌಶಲ್ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ 6ನೇ ತರಗತಿ ವಿದ್ಯಾರ್ಥಿ.

ಕಲಿಕೆಯಲ್ಲಿ ಮಾತ್ರವಲ್ಲದೆ ನಟನೆ, ಹಾಡುಗಾರಿಕೆ, ನೃತ್ಯ ಮೊದಲಾದ ರಂಗದಲ್ಲಿ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಅವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಸೀಸನ್-4ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದ ಪುರಸ್ಕಾರ ಪಡೆದುಕೊಂಡಿದ್ದಾರೆ. ಮೈ ಹೀರೋ ಎಂಬ ತ್ರಿ ಭಾಷಾ ಹಾಲಿವುಡ್ ಚಲನಚಿತ್ರದಲ್ಲಿ ನಟಿಸಿ ಅಂತಾರಾಷ್ಟ್ರೀಯಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಛಲವಾರ, ಅಮೃತಾಂಜನ್, ಪುಟಾಣಿ ಪಂಟ್ರು, ಕುಲದಲ್ಲಿ ಕೀಳಾವುದೋ, ರವಿಕೆ ಪ್ರಸಂಗ ಮುಂತಾದ ಚಿತ್ರದಲ್ಲಿ ನಟಿಸಿ ದ.ಕ., ಹಾಸನ ಜಿಲ್ಲೆ, ಮಡಿಕೇರಿಯಲ್ಲಿ ಸನ್ಮಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net