ಹೈನುಗಾರಿಕೆಯಲ್ಲಿ ಹಣ ಗಳಿಸುವುದು ಹೇಗೆ?

Farming
Published on

ಭಾರತ ಕೃಷಿ ಪ್ರಧಾನ ದೇಶ. ಕೃಷಿ ಎಂದಾಕ್ಷಣ ನಮ್ಮ ಕಣ್ಮುಂದೆ ಬರೋದು ಕೃಷಿ ಭೂಮಿ ಹಾಗೂ ರೈತ. ಆದರೆ ಕೃಷಿಯಲ್ಲಿ ಗೋಮಾತೆಯ ಪಾತ್ರ ವಿಶಿಷ್ಟವಾದುದು. ಸನಾತನ ಧರ್ಮದ ಕಾಲದಿಂದಲೂ ಹೈನುಗಾರಿಕೆ ರೈತರ ಪೋಷಣೆ ಮಾಡುತ್ತ ಕೈ ಹಿಡಿದು ನಡೆಸುತ್ತಾ ಸಾಗಿದೆ. ಸಮಯ ಕಳೆದಂತೆ, ಹೈನೋದ್ಯಮ ಹಲವಾರು ಸಮುದಾಯ,

ಪ್ರದೇಶ ಮತ್ತು ದೇಶಗಳ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತ ಬಂದಿದೆ. ನಮ್ಮ ರಾಷ್ಟ್ರದ ಸಮೃದ್ಧಿ ಮತ್ತು ಸಂಪತ್ತನ್ನು ನಿರ್ಧರಿಸುವಲ್ಲಿ ಹೈನುಗಾರಿಕೆ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಇಷ್ಟೇ ಅಲ್ಲದೆ, ನಮ್ಮ ದೇಶದ ಒಟ್ಟು ಜಿಡಿಪಿಯಲ್ಲಿ ಶೇ.4 ಕೊಡುಗೆಯನ್ನೂ ಹೈನುಗಾರಿಕೆ ನೀಡುತ್ತದೆ. ಸಂಘಟಿತ ಮತ್ತು ತಾಂತ್ರಿಕವಾಗಿ ಮುಂದುವರಿದಿರುವ ಹೈನುಗಾರಿಕೆಯು ಹೆಚ್ಚು ಲಾಭದಾಯಕ ಕಸುಬಾಗಿದೆ. ಅದೆಷ್ಟೋ ಜನರು ಲಕ್ಷಾಂತರ ಹಣವನ್ನು ಸಂಪಾದಿಸಲು ಹೈನುಗಾರಿಕೆ ದಾರಿಯಾಗಿದೆ. ಇಂತಹ ಹೈನುಗಾರಿಕೆಯ ವಿಶೇಷ ವಿಚಾರಧಾರೆ ಈ ಅಂಕಣದಲ್ಲಿದೆ.

ಹೈನುಗಾರಿಕೆ ಎಂದರೇನು?: ‘ಗೋ ಮೂತ್ರಮೇ ಭಗವಾನ್ ಧನ್ವಂತರಿ ವಿರಾಜಮಾನ್ ಹೇ’ ಎಂಬ ನಾಣ್ನುಡಿಯೊಂದು ಹೇಳುವಂತೆ ನಮ್ಮ ಭಾರತ ದೇಶದಲ್ಲಿ ಹಸುವಿಗೆ ದೈವಿಕ ಶಕ್ತಿಯಿದೆ ಎಂದು ನಂಬಲಾಗಿದೆ. ಕಾಮಧೇನು ತನ್ನನ್ನು ನಂಬಿದ ಮತ್ತು ಸಲುಹಿದ ಮನುಜರನ್ನು ಎಂದೂ ಕೈ ಬಿಡೋದಿಲ್ಲ ಎಂಬ ವಿಶ್ವಾಸಕ್ಕೆ ಸಾಕ್ಷಿ ಎಂಬಂತೆ ಹಲವಾರು ಜನ ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ ಮತ್ತು ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆ ಅಥವಾ ಡೇರಿ ಫಾರ್ವಿುಂಗ್ ಎನ್ನುವುದು ಹಾಲಿನ ದೀರ್ಘಕಾಲೀನ ಉತ್ಪಾದನೆಯಾಗಿದ್ದು, ಕೃಷಿಯ ಒಂದು ಭಾಗವಾಗಿದೆ. ಹಾಲು, ಹಾಲಿನ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಹೈನೋದ್ಯಮ ಎಂದು ಕರೆಯಬಹುದು. ಹೈನುಗಾರಿಕೆಯು ಕೃಷಿಗೆ ಪೂರಕವಾಗಿ ಸ್ವ ಉದ್ಯೋಗವಾಗಿದ್ದು, ವರ್ಷವಿಡೀ ನಿರಂತರ ಆದಾಯ ತರಬಲ್ಲದು. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಒಂದು ವಾಣಿಜ್ಯ ಉದ್ಯಮವಾಗಿ ಬೆಳೆಯುತ್ತಿದೆ. ಹೈನುಗಾರಿಕೆಯನ್ನು ಲಾಭದಾಯಕ ಮಾಡುವಲ್ಲಿ ಉತ್ತಮ ಹೈನು ತಳಿಗಳ ಆಯ್ಕೆ, ವೈಜ್ಞಾನಿಕ ನಿರ್ವಹಣೆ, ಸಮತೋಲನ ಆಹಾರದ ಪೂರೈಕೆ, ದನಗಳ ಆರೋಗ್ಯ ರಕ್ಷಣೆ ಮತ್ತು ವ್ಯವಸ್ಥಿತ ಮಾರುಕಟ್ಟೆಯಿಂದ ಹಾಲು ಮಾರಾಟ... ಇವು ಮಹತ್ತರ ಪಾತ್ರ ವಹಿಸುತ್ತವೆ.

ಭಾರತದ ಪ್ರಮುಖ ಹೈನು ತಳಿಗಳು: ಸಾಹಿವಾಲ್, ಸಿಂಧಿ, ಗಿರ್, ಥಾರಪಾರಕರ್, ದೇವಣಿ, ಓಂಗೋಲಾ, ಹರಿಯಾಣ, ಕಾಂಕ್ರೇಜ್, ಜರ್ಸಿ, ಹೋಲಸ್ಟಿನ್ ಫ್ರಿಜಿಯನ್ ಎಚ್​ಎಫ್, ಎಚ್​ಎಫ್​ಎಕ್ಸ್ ದೇವಣಿ, ಸೂರ್ತಿ, ಮುರ್ರಾ, ಧಾರವಾಡಿ, ಫಂಡರಪುರಿ- ಇವು ಎಮ್ಮೆ ತಳಿಗಳು.

ಉತ್ತಮ ತಳಿ ಆಯ್ಕೆ ವೇಳೆ ಗಮನಿಸಬೇಕಾದ ಅಂಶಗಳು: ಹಸುಗಳನ್ನು ಕೊಳ್ಳುವಾಗ ಅವುಗಳ ಬಗ್ಗೆ ವಂಶಾವಳಿಗಳ ದಾಖಲೆ ಇದ್ದರೆ, ಅದರ ವಂಶದ ಹಾಲಿನ ಉತ್ಪಾದನೆ ಸಾಮರ್ಥ್ಯ ಮತ್ತು ಅವುಗಳ ಹಿಂದಿನ ಸಾಲಿನ ಹಾಲಿನ ಇಳುವರಿಯನ್ನು ಪರಿಶೀಲಿಸಿ ಹೆಚ್ಚು ಹಾಲು ಉತ್ಪಾದನೆಯುಳ್ಳ ವಂಶದ ದನಗಳನ್ನು ಖರೀದಿಸಬೇಕು.

ಹೈನುಗಾರಿಕೆ ಉಪಯೋಗಗಳು: ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸುವಲ್ಲಿ ಹಾಲು ಮತ್ತು ಡೇರಿ ಉತ್ಪನ್ನಗಳು ಎತ್ತಿದ ಕೈ. ಏಕೆಂದರೆ ಅವು ಕ್ಯಾಲ್ಸಿಯಂನ ಸಮೃದ್ಧ ಮೂಲಗಳಾಗಿವೆ. ಡೇರಿ ಆಹಾರಗಳು ಕ್ಯಾಲ್ಸಿಯಂ, ರಂಜಕ, ಬಿ ಜೀವಸತ್ವಗಳು, ಪೊಟ್ಯಾಶಿಯಂ ಮತ್ತು ವಿಟಮಿನ್ ಡಿ ಪ್ಲಸ್, ಪ್ರೋಟೀನ್, ಮೆಗ್ನೀಸಿಯಂ ಮತ್ತು ಇತರ ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಪೋಷಕಾಂಶಗಳು ಬಲವಾದ ಮೂಳೆಗಳನ್ನು ನಿರ್ವಿುಸಲು ಮತ್ತು ನಿರ್ವಹಿಸಲು ಅತ್ಯವಶ್ಯಕ. ಹಸು ಗೊಬ್ಬರವು ಖನಿಜಗಳಿಂದ ಸಮೃದ್ಧವಾಗಿದೆ, ವಿಶೇಷವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಮಣ್ಣಿನೊಂದಿಗೆ ಬೆರೆತಾಗ ಪ್ರಯೋಜನಕಾರಿಯಾದ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಯನ್ನು ಬೆಂಬಲಿಸುವುದರಿಂದ ಗೊಬ್ಬರವು ಮಣ್ಣಿನ ವಿನ್ಯಾಸವನ್ನು ಸುಧಾರಿಸುತ್ತದೆ. ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು. ಗೋ ಮೂತ್ರವು ಮಧುಮೇಹ, ರಕ್ತದೊತ್ತಡ, ಆಸ್ತಮಾ, ಸೋರಿಯಾಸಿಸ್, ಹೃದಯಾಘಾತ, ಅಪಧಮನಿಗಳಲ್ಲಿನ ಅಡೆತಡೆಗಳು, ಫಿಟ್ಸ್, ಕ್ಯಾನ್ಸರ್, ಏಡ್ಸ್, ಪ್ರಾಸ್ಟ್ರೇಟ್, ಸಂಧಿವಾತ, ಮೈಗ್ರೇನ್, ಥೈರಾಯ್್ಡ ಹುಣ್ಣು, ಆಮ್ಲೀಯತೆ, ಮಲಬದ್ಧತೆ, ಸ್ತ್ರೀರೋಗ ಮುಂತಾದ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕೆಲಸ ಮಾಡುತ್ತದೆ.

ಹೈನುಗಾರಿಕೆಗೆ ಸರ್ಕಾರದಿಂದ ಬೆಂಬಲ: ಹೈನುಗಾರಿಕೆ ಮತ್ತು ಭಾರತದ ಡೇರಿ ವಲಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸಿದೆ. ಡೇರಿ ಕೃಷಿ ಉದ್ಯಮಕ್ಕೆ ರಚನೆಯನ್ನು ತರುವ ಮತ್ತು ಡೇರಿ ಫಾರಂಗಳನ್ನು ಸ್ಥಾಪಿಸಲು ನೆರವು ನೀಡುವ ಪ್ರಯತ್ನದಲ್ಲಿ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ 2005ರಲ್ಲಿ ಡೇರಿ ಮತ್ತು ಕೋಳಿ ಸಾಹಸೋದ್ಯಮ ಬಂಡವಾಳ ಯೋಜನೆಯನ್ನು ಪ್ರಾರಂಭಿಸಿತು. ಡೇರಿ ಮತ್ತು ಕೋಳಿ ಸಾಹಸೋದ್ಯಮ ಯೋಜನೆ ಯಶಸ್ಸಿನ ನಂತರ, 2010ರಲ್ಲಿ ಸರ್ಕಾರ ಡೇರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯನ್ನು ನಬಾರ್ಡ್ ಮೂಲಕ ಪ್ರಾರಂಭಿಸಿತು.

ಡೇರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆ (ಡಿಇಡಿಎಸ್): ಇದು ಶುದ್ಧ ಹಾಲು ಉತ್ಪಾದನೆಗೆ ಆಧುನಿಕ ಡೇರಿ ಫಾಮರ್್​ಗಳ ಸ್ಥಾಪನೆ, ಹಸು- ಕರುಗಳ ಪಾಲನೆ ಉತ್ತೇಜಿಸಲು, ಈ ಮೂಲಕ ಡೇರಿ ಫಾಮ್ರ್ಗಳ ಬೆಳವಣಿಗೆಗಾಗಿ ಡಿಇಡಿಎಸ್ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ರೀತಿಯಾಗಿ ನಬಾರ್ಡ್ ಮೂಲಕ ಹಲವಾರು ಸಬ್ಸಿಡಿಗಳೂ ಲಭ್ಯವಿವೆ.

ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಹೈನುಗಾರಿಕೆ

ಡೇರಿ ವ್ಯವಹಾರವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಒಂದು ಸಾಧನವನ್ನು ಒದಗಿಸುವುದರ ಜತೆಗೆ ಉತ್ತಮ ಆದಾಯವನ್ನು ನೀಡುತ್ತದೆ. ಆದರೆ ಹೈನುಗಾರಿಕೆ ಪ್ರಾರಂಭಿಸುವ ಮೊದಲು ಕೆಲವು ಪ್ರಮುಖ ಅಂಶಗಳ ಅರಿವು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆ ಅಂಶಗಳಾದ್ರು ಯಾವುವು? ಆ ಎಲ್ಲ ಅಂಶಗಳನ್ನರಿತು ಹೈನುಗಾರಿಕೆಯಲ್ಲಿ ಯಶಸ್ಸು ಕಾಣುವುದು ಹೇಗೆ? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಂಡಿಯನ್ ಮನಿ.ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿರುವ ಹೈನುಕಾರಿಕೆ ಬಗೆಗಿನ ಕೋರ್ಸ್. ಈ ಕೋರ್ಸ್ ಮೂಲಕ ಇದೇ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಿ ಲಕ್ಷಾಂತರ ಹಣ ಗಳಿಸುತ್ತಿರುವ ಸಾಧಕರು ನಿಮ್ಮ ಮಾರ್ಗದರ್ಶಕರಾಗಿ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರವನ್ನೊದಗಿಸುವ ಮೂಲಕ ನಿಮ್ಮನ್ನು ಸಾಧಕರನ್ನಾಗಿಸುತ್ತಾರೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಇಚ್ಛಿಸುವ ನಿಮ್ಮೆಲ್ಲರಿಗೂ ನಮ್ಮ ಅಭಿನಂದನೆಗಳು.

ಹೈನುಗಾರಿಕೆ ಕೋರ್ಸ್​ನಲ್ಲಿ ಏನಿದೆ?

  • ಹೈನುಗಾರಿಕೆ- ಪರಿಚಯ
  • ಹೈನುಗಾರಿಕೆ ಕೋರ್ಸ್​ನ ಮೆಂಟರ್ಸ್​ಗಳ ಪರಿಚಯ
  • ಬಂಡವಾಳ ಮತ್ತು ಹಣಕಾಸು
  • ದನ-ಕರು ಮತ್ತು ಅವುಗಳ ಆರೋಗ್ಯ
  • ಭೂಮಿಯ ಅವಶ್ಯಕತೆ ಮತ್ತು ದನದ ಕೊಟ್ಟಿಗೆ
  • ದನ-ಕರುಗಳ ಮೇವು ಮತ್ತು ಆಹಾರ
  • ಜನರು ಮತ್ತು ತಂತ್ರಜ್ಞಾನ
  • ಹಾಲು ಉತ್ಪಾದನೆ ಮತ್ತು ಪೂರೈಕೆ ನಿರ್ವಹಣೆ
  • ಹೆಚ್ಚುವರಿ ವ್ಯಾಪಾರ ಅಥವಾ ಉಪ ಉತ್ಪನ್ನಗಳು
  • ಬೆಲೆ ಮತ್ತು ಹಣಕಾಸು ನಿರ್ವಹಣೆ
  • ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ
  • ಹೈನುಗಾರಿಕೆ ಉದ್ಯಮದಲ್ಲಿ ಎದುರಾಗುವ ಸವಾಲುಗಳು

ಹೈನುಗಾರಿಕೆ ಕೋರ್ಸ್​ನ ಮಾರ್ಗದರ್ಶಕರು

  • ಚೈತನ್ಯ- ಉಡುಪಿ
  • ಅಭಿಲಾಷ್- ಬೆಂಗಳೂರು
  • ದಿಲೀಪ್- ಮೈಸೂರು
  • ವರುಣ್- ಚಿಕ್ಕಬಳ್ಳಾಪುರ
  • ನಾಗರಾಜ್ ಪೈ- ಉಡುಪಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net