ಗಣಪತಿ ನೈವೇದ್ಯಕ್ಕೆ ಮೋದಕ ಮಾಡುವ ಸರಳ ವಿಧಾನ ನಿಮಗಾಗಿ...Ganesh Chaturthi

Ganesh Chaturthi
Published on

Ganesh Chaturthi : ಗಣೇಶ ಚತುರ್ಥಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖವಾದ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ವಿನಾಯಕ ಚತುರ್ಥಿ ಅಥವಾ ಗಣೇಶೋತ್ಸವ ಎಂದೂ ಕರೆಯಲಾಗುತ್ತದೆ. ಜ್ಞಾನ, ಸಮೃದ್ಧಿ ಮತ್ತು ಶುಭ ಆರಂಭದ ಸಂಕೇತವಾಗಿದ್ದಾನೆ. ಈ ಹಬ್ಬದ ಸಂಭ್ರಮಾಚರಣೆಯಲ್ಲಿ ನೀವು ಗಣೇಶನಿಗೆ ಪ್ರಿಯವಾದ ಮೋದಕ ಮಾಡುವುದು ವಾಡಿಕೆ. ಮೋದಕವು ಗಣೇಶ ಚತುರ್ಥಿಯ ( Ganesh Chaturthi) ಸಂದರ್ಭದಲ್ಲಿ ತಯಾರಿಸುವ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಮೋದಕ ಮಾಡಲು ಬೇಕಾಗಿರುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಇಲ್ಲಿ ಸರಳವಾಗಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು :

ಮೈದಾಹಿಟ್ಟು: 1 ಕಪ್

ಗೋಧಿ ಹಿಟ್ಟು: 1 ಕಪ್

ನೀರು: 1.25 ಕಪ್

ಉಪ್ಪು: ಒಂದು ಚಿಟಿಕೆ

ತುಪ್ಪ, ಅಡುಗೆ ಎಣ್ಣೆ: 4 ಚಮಚ

ಮೈದಾಹಿಟ್ಟು, ಗೋಧಿ ಹಿಟ್ಟು, ಉಪ್ಪು ಸೇರಿಸಿ ಅದಕ್ಕೆ 2 ಚಮಚ ಬಿಸಿ ಮಾಡಿದ ತುಪ್ಪ, ಅಡುಗೆ ಎಣ್ಣೆ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷ ಹಾಗೆಯೇ ತೆಗೆದು ಇಡಿ.

ಹೂರಣ ಮಾಡಲು ಬೇಕಾಗಿರುವ ಸಾಮಗ್ರಿಗಳು:

ತೆಂಗಿನಕಾಯಿ ತುರಿ: 1 ಕಪ್

ಬೆಲ್ಲ: 3/4 ಕಪ್

ಏಲಕ್ಕಿ ಪುಡಿ: 1 ಚಮಚ

ಒಣಗಿದ ದ್ರಾಕ್ಷಿ ಅಥವಾ ಗೋಡಂಬಿ (ಐಚ್ಛಿಕ): ಅರ್ಧ ಕಪ್​

ತುಪ್ಪ: 4 ಚಮಚ

ಒಂದು ಬಾಣಲೆಯಲ್ಲಿ 2 ಚಮಚ ತುಪ್ಪವನ್ನು ಬಿಸಿ ಮಾಡಿ.ತೆಂಗಿನಕಾಯಿ ತುರಿಯನ್ನು ಹಾಕಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಹುರಿಯಿರಿ.

ಬೆಲ್ಲವನ್ನು ಪುಡಿಮಾಡಿ, ತೆಂಗಿನಕಾಯಿಗೆ ಸೇರಿಸಿ. ಚೆನ್ನಾಗಿ ಕಲಕಿ, ಬೆಲ್ಲ ಕರಗಿ ದಪ್ಪವಾಗುವವರೆಗೆ ಬೇಯಿಸಿ. ಏಲಕ್ಕಿ ಪುಡಿ ಮತ್ತು ಒಣಗಿದ ದ್ರಾಕ್ಷಿ/ಗೋಡಂಬಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ತಣ್ಣಗಾಗಲು ಬಿಟ್ಟರೆ ಹೂರಣ ಸಿದ್ಧವಾಗುತ್ತದೆ.

ಮೋದಕ ತಯಾರಿಸುವ ವಿಧಾನ:

ಹಿಟ್ಟನ್ನು ಮೈದಾದಲ್ಲಿ ಅದ್ದಿ ಚಪಾತಿಯಂತೆ ಲಟ್ಟಿಸಬೇಕು. ಬಳಿಕ ತಯಾರಿಸಿಟ್ಟ ಹೂರಣವನ್ನು ಅದರ ಮಧ್ಯದಲ್ಲಿ ಇಟ್ಟು ಕೈಯಲ್ಲೇ ತಿರುಗಿಸುತ್ತಾ ಸರಿಯಾದ ಆಕಾರಕ್ಕೆ ತರಬೇಕು.

ಬಳಿಕ ಕುದಿಯುವ ಎಣ್ಣೆಗೆ ಅದನ್ನು ಹಾಕಿ ಸರಿಯಾಗಿ ಬೆಂದ ಬಳಿಕ ಎಣ್ಣೆಯಿಂದ ತೆಗೆಯಬೇಕು. ಮೋದಕ ಸಿದ್ಧ.

ಸಲಹೆಗಳು:

ಬೆಲ್ಲದ ಬದಲಿಗೆ ಸಕ್ಕರೆ ಬಳಸಬಹುದು, ಆದರೆ ಬೆಲ್ಲ ಸಾಂಪ್ರದಾಯಿಕ ರುಚಿಯನ್ನು ನೀಡುತ್ತದೆ. ಮೋದಕದ ಅಚ್ಚು ಇದ್ದರೆ, ರೂಪಿಸುವುದು ಸುಲಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net