ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬೆನ್ನು ನೋವಿಗೆ ಪರಿಹಾರ ಕ್ರಮ ಇಂತಿದೆ...

women back pain
Published on

ಬೆಂಗಳೂರು:  ನಲವತ್ತು ವರ್ಷಗಳ ನಂತರ ಅನೇಕ ಮಹಿಳೆಯರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ನಿರಂತರ ಬೆನ್ನು ನೋವು. ಇದರ ಹಿಂದೆ ಹಲವು ಕಾರಣಗಳಿರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಹೆಚ್ಚಿನ ಮಹಿಳೆಯರಿಗೆ ತಡವಾದ ಗರ್ಭಧಾರಣೆ, ಆಸ್ಟಿಯೊಪೊರೋಸಿಸ್, ಬೊಜ್ಜು, ಋತುಬಂಧ, ಜೀವನಶೈಲಿ, ಸ್ನಾಯುವಿನ ಒತ್ತಡದಿಂದ ಬೆನ್ನು ನೋವು ಕಾಣಿಸಿಕೊಳ್ಳಬಹುದಾಗಿದೆ. 40ರ ನಂತರ ಬೆನ್ನು ನೋವಿನಿಂದ ಬಳಲುತ್ತಿದ್ದರೆ ಅದರಿಂದ ಪರಿಹಾರ ಪಡೆಯಲು ಕೆಲವು ಮಾರ್ಗಗಳಿವೆ. ಅದನ್ನು ನೋಡೋಣ...

1) ಬೆನ್ನು ನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮ ಬಹಳ ಮುಖ್ಯ.

2) ನಿಂತಿರುವಾಗ ಅಥವಾ ಕುಳಿತುಕೊಳ್ಳುವಾಗ ನಿಮ್ಮ ಕುಳಿತುಕೊಳ್ಳುವ ಮತ್ತು ನಿಂತಿರುವ ಸ್ಥಾನಕ್ಕೆ ವಿಶೇಷ ಗಮನ ಕೊಡುವುದು ಮುಖ್ಯ.  ಸಾಧ್ಯವಾದರೆ ನೇರವಾಗಿ ನಿಂತುಕೊಳ್ಳುವುದು ಹಾಗೂ ಮಲಗುವುದು ಅಭ್ಯಾಸ ಮಾಡಿಕೊಳ್ಳಿ.

3) ಬೆನ್ನುನೋವಿನಿಂದ ಬಳಲುತ್ತಿರುವವರಿಗೆ ತೂಕವನ್ನು ಕಳೆದುಕೊಳ್ಳುವುದು ಮುಖ್ಯವಾಗಿದೆ. ತೂಕ ಹೆಚ್ಚಾಗುವುದು ಬೆನ್ನುನೋವಿಗೆ ಕಾರಣವಾಗಬಹುದು. ಆದ್ದರಿಂದ ನೀವು ಅಧಿಕ ತೂಕ ಹೊಂದಿದ್ದರೆ, ತಕ್ಷಣವೇ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ.

4) ಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ.

5) ವ್ಯಾಯಾಮ ಮಾಡುವ ಮಹಿಳೆಯರಿಗೆ ಬೆನ್ನು ನೋವು ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ತೋರಿಸುತ್ತವೆ.

6) ಅದರಲ್ಲೂ ಹೆಚ್ಚು ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರಾಗಿದ್ದರೆ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗಾಗ ಓಡಾಡುವ ಅಭ್ಯಾಸ ಮಾಡಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net