ಬೇಸಿಗೆಯಲ್ಲಿ ಅಲೋವೆರಾ ಜೆಲ್ ಹಚ್ಚುವುದು ಹೇಗೆ? ನಿಮ್ಮ ಮುಖಕ್ಕೆ ಗ್ಲೋಯಿಂಗ್​​ ಲುಕ್​​ ಬೇಕಾದರೆ ಹೀಗೆ ಮಾಡಿ... Aloe Vera Gel

Aloe Vera Gel
Published on

Aloe Vera Gel | ಬೇಸಿಗೆ ಬಂತೆಂದರೆ ಸಾಕು ಸೂರ್ಯನ ಬೆಳಕು, ಶಾಖ, ಧೂಳು ಮತ್ತು ಬೆವರಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮೊಡವೆ, ದದ್ದು ಮತ್ತು ಟ್ಯಾನಿಂಗ್‌ನಂತಹ ಚರ್ಮದ ಸಮಸ್ಯೆಗಳಿಂದ ಜನರು ತೊಂದರೆಗೊಳಗಾಗುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳನ್ನು ನಿವಾರಿಸಲು ಜನರು ವಿವಿಧ ರೀತಿಯ ಸ್ಕಿನ್​ ಆರೈಕೆ ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವುಗಳು ನಿಮ್ಮ ಚರ್ಮಕ್ಕೆ ಹಾನಿ ಮಾಡುವ ರಾಸಾಯನಿಕಗಳಿಂದ ಕೂಡಿರಬಹುದು. ಆದ್ದರಿಂದ ಬೇಸಿಗೆಯಲ್ಲಿ ನಿಮ್ಮ ಸ್ಕಿನ್​​ ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ನೀವು ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಬಹುದು. ಅಂತಹ ವಸ್ತುಗಳಲ್ಲಿ ಅಲೋವೆರಾ ಕೂಡ ಒಂದು.

ಹೌದು ಅಲೋವೆರಾ ಚರ್ಮಕ್ಕೆ ತಂಪು ಮತ್ತು ತೇವಾಂಶವನ್ನು ನೀಡುತ್ತದೆ. ಇದು ನಿಮ್ಮ ಸ್ಕಿನ್​​ ಅಲರ್ಜಿ ಮತ್ತು ಬಿಸಿಲಿನಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದು ಮೊಡವೆ, ಕಲೆಗಳು ಮತ್ತು ಟ್ಯಾನಿಂಗ್​​ನ್ನು ತೆಗೆಯಲು ಸಹಾಯ ಮಾಡುತ್ತದೆ. ಮುಖದ ಮೇಲೆ ನಿಯಮಿತವಾಗಿ ಅಲೋವೆರಾವನ್ನು ಹಚ್ಚುವುದರಿಂದ ಸ್ಕಿನ್​ ಮೃದು ಹಾಗೂ ಹೊಳೆಯುತ್ತದೆ. ಹಾಗಾದರೆ ಬನ್ನಿ ಬೇಸಿಗೆಯಲ್ಲಿ ಮುಖಕ್ಕೆ ಅಲೋವೆರಾವನ್ನು ಹೇಗೆ ಹಚ್ಚಬೇಕು ಎನ್ನುವುದನ್ನು ತಿಳಿಯೋಣ.

ಅಲೋವೆರಾ ಮತ್ತು ಮುಲ್ತಾನಿ ಮಿಟ್ಟಿ:

ಬೇಸಿಗೆಯಲ್ಲಿ ನೀವು ಅಲೋವೆರಾವನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚಬಹುದು. ಇದಕ್ಕಾಗಿ 2 ಚಮಚ ಮುಲ್ತಾನಿ ಮಿಟ್ಟಿ ಹಾಗೂ 2 ಚಮಚ ತಾಜಾ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಆ ಪೇಸ್ಟ್ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಮೊಡವೆ, ಕಲೆಗಳು, ಸುಕ್ಕುಗಳು, ಬಿಸಿಲಿನ ಬೇಗೆ ಮತ್ತು ಟ್ಯಾನಿಂಗ್ ಸಮಸ್ಯೆಯನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

ಅಲೋವೆರಾ ಹಾಗೂ ರೋಸ್ ವಾಟರ್

ನೀವು ಅಲೋವೆರಾವನ್ನು ರೋಸ್ ವಾಟರ್ ಜೊತೆ ಮುಖಕ್ಕೆ ಹಚ್ಚಬಹುದು. ಇದಕ್ಕಾಗಿ ಒಂದು ಚಮಚ ತಾಜಾ ಅಲೋವೆರಾ ಜೆಲ್ ಮತ್ತು ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಸುಮಾರು 15 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಸ್ಕಿನ್​​ನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಅದು ಸ್ಕಿನ್​​ ಅಲರ್ಜಿ ಮತ್ತು ಕೆಂಪು ಬಣ್ಣ ಕಡಿಮೆಯಾಗುತ್ತದೆ.

ಅಲೋವೆರಾ ಜೊತೆ ನಿಂಬೆ

ಬೇಸಿಗೆಯಲ್ಲಿ ಫ್ರೆಶ್​​ ಮತ್ತು ಹೊಳೆಯುವ ಸ್ಕಿನ್​ ಪಡೆಯಲು ನೀವು ನಿಂಬೆಯನ್ನು ಅಲೋವೆರಾದೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಬಹುದು. ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ, ಇದು ಸ್ಕಿನ್​​ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ 2 ಟೀ ಚಮಚ ತಾಜಾ ಅಲೋವೆರಾ ಜೆಲ್ ಹಾಗೂ ಅದಕ್ಕೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತದನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಸುಮಾರು 10 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಮುಖಕ್ಕೆ ನೈಸರ್ಗಿಕ ಗ್ಲೋ ನೀಡುತ್ತದೆ.

ಅಲೋವೆರಾ ಮತ್ತು ಸೌತೆಕಾಯಿ

ಸೌತೆಕಾಯಿಯನ್ನು ಅಲೋವೆರಾದೊಂದಿಗೆ ಜೊತೆ ನಿಮ್ಮ ಮುಖಕ್ಕೆ ಹಚ್ಚಬಹುದು. ಸೌತೆಕಾಯಿ ನಿಮ್ಮ ಸ್ಕಿನ್​ಗೆ ತಂಪು ಮತ್ತು ತಾಜಾತನವನ್ನು ನೀಡುತ್ತದೆ. ಅಲ್ಲದೆ ಇದು ಟ್ಯಾನಿಂಗ್ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಚಮಚ ಅಲೋವೆರಾ ಜೆಲ್ ಹಾಗೂ ಅದಕ್ಕೆ ಒಂದು ಚಮಚ ಸೌತೆಕಾಯಿ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ಸುಮಾರು 15 ನಿಮಿಷಗಳ ನಂತರ, ನೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

ಅಲೋವೆರಾ ಮತ್ತು ಜೇನುತುಪ್ಪ

ಬೇಸಿಗೆಯಲ್ಲಿ ನೀವು ಅಲೋವೆರಾವನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಬಹುದು. ಅದನ್ನು ಮಾಡಲು ಒಂದು ಚಮಚ ಅಲೋವೆರಾ ಜೆಲ್ ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಕೈಗಳಿಂದ ಮುಖಕ್ಕೆ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದು ಚರ್ಮದ ಕಲೆಗಳು, ಮೊಡವೆಗಳು ಮತ್ತು ಟ್ಯಾನಿಂಗ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ಚರ್ಮವು ಮೃದು ಮತ್ತು ಗ್ಲೋ ಲುಕ್​​ ನೀಡುತ್ತದೆ.

ಈ ರೀತಿಯಾಗಿ ಬೇಸಿಗೆಯಲ್ಲಿ ನೀವು ನಿಮ್ಮ ಮುಖಕ್ಕೆ ಆರೈಕೆಯನ್ನು ಮಾಡಬಹುದು. ಇದರಿಂದ ಮುಖ ಗ್ಲೋಯಿಂಗ್​​ ಲುಕ್​​ ಜೊತೆಗೆ ಸೂರ್ಯನ ಬಿಸಿಲಿನಿಂದ ನಿಮ್ಮ ತ್ವಚೆಯನ್ನು ಸಂರಕ್ಷಿಸುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net