ದಿನದ ಆನಂದಕ್ಕೆ ಸೂಪರ್ ಸೀಕ್ರೆಟ್! ಈ ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ! Smart morning

untitled-design-53-690445c751ca3
Published on

Smart morning: ಬೆಳಗಿನ ಸಮಯವು ಇಡೀ ದಿನಕ್ಕೆ ಒಂದು ಮೈಲಿಗಲ್ಲು ಇದ್ದಂತೆ. ನಿಮ್ಮ ಬೆಳಗಿನ ದಿನಚರಿಗಳು ಹೇಗೆ ಪ್ರಾರಂಭವಾಗುತ್ತವೆಯೋ, ಹಾಗೇ ನಿಮ್ಮ ಮನಸ್ಸು ಆ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸಣ್ಣ ಸಣ್ಣ ಬದಲಾವಣೆಗಳು ಮನಸ್ಥಿತಿಯನ್ನು ಸುಧಾರಿಸಿ, ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಪ್ರತಿನಿತ್ಯ ಬೆಳಿಗ್ಗೆ ಎದ್ದ ನಂತರ ಈ ರೀತಿಯ ಪರಿಣಾಮಕಾರಿ ಕಾರ್ಯಗಳನ್ನು ಮಾಡುವುದರಿಂದ ನೀವು ಅನೇಕ ರೀತಿಯ ಲಾಭವನ್ನು ಪಡೆಯಬಹದು. ಹಾಗಿದ್ದರೆ, ಅವು ಯಾವುದು ನೋಡೋಣ ಬನ್ನಿ....

1. ನಿರ್ದಿಷ್ಟ ಸಮಯಕ್ಕೆ ಎದ್ದೇಳುವುದನ್ನು ಅಭ್ಯಾಸ ಮಾಡಿ

ಪ್ರತಿದಿನ ನೀವು ಒಂದೇ ಸಮಯದಲ್ಲಿ ಮಲಗುವುದು ಏಳುವುದು ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸುತ್ತದೆ. ಹೀಗೆ ಮಾಡುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸಿ, ನಿಮ್ಮ ಶಕ್ತಿ ಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದಿನಪೂರ್ತಿ ಉಲ್ಲಾಸದಾಯಕವಾಗಿ ಕಳೆಯಬಹುದು.

2. ನೀರು ಕುಡಿಯಿರಿ

ಬೆಳಿಗ್ಗೆ ಎದ್ದ ತಕ್ಷಣ 1 ಲೋಟ ತಣ್ಣೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಆರಂಭವಾಗುತ್ತದೆ. ನಿಮ್ಮ ದೇಹದಲ್ಲಿ ಜಲಸಂಚಯನಗೊಳ್ಳುತ್ತದೆ. ಇದರಿಂದ ನಿಮ್ಮಲ್ಲಿ ಜಾಗರೂಕತೆ ಹೆಚ್ಚಾಗುತ್ತದೆ. ಈ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ವಿಟಮಿನ್​ ಸಿ ಸಿಗುವುದರ ಜೊತೆಗೆ ಜೀರ್ಣಕ್ರಿಯೆ ನಡೆಸಲು ಸಹಾಯವಾಗುತ್ತದೆ..

3. ದೈಹಿಕ ವ್ಯಾಯಾಮ

ನಿಮ್ಮ ದಿನ ಆರೋಗ್ಯವಾಗಿ ಪ್ರಾರಂಭವಾಗಬೇಕೆಂದರೆ ಎದ್ದ ನಂತರ 30 ನಿಮಿಷಗಳ ಕಾಲ ವ್ಯಾಯಾಮ, ಯೋಗ, ನಡೆಯುವುದನ್ನು ಮಾಡಿ. ಇದು ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಿ, ಚಿಂತೆಗಳನ್ನು ದೂರ ಸರಿಯುವಂತೆ ಮಾಡುತ್ತದೆ.

4. ಮೈಂಡ್‌ಫುಲ್‌ನೆಸ್ ಅಭ್ಯಾಸ ಮಾಡಿ

ಪ್ರತಿದಿನ ಧ್ಯಾನ, ದಿನಚರಿ ಬರೆಯುವಿಕೆ ಅಥವಾ ಕೃತಜ್ಞತೆಯನ್ನು ಅಭ್ಯಾಸ ಮಾಡಲೆಂದು ಸ್ವಲ್ಪ ಸಮಯವನ್ನು ಕಳೆಯಿರಿ. ಇದು ನಿಮ್ಮ ಏಕಾಗ್ರತೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಮನಸ್ಸನ್ನು ಚಂಚಲಗೊಳಿಸದೆ ದೀರ್ಘವಾಗಿ ಒಂದು ವಿಷಯದ ಮೇಲೆ ಕೆಂದ್ರೀಕರಿಸುವಂತೆ ಮಾಡುತ್ತದೆ.

5. ಸಮತೋಲಿತ ಆಹಾರ ಸೇವಿಸಿ

ನೀವು ಸೇವಿಸುವ ಪೌಷ್ಟಿಕ ಆಹಾರವು ನಿಮ್ಮ ದೇಹ ಮತ್ತು ಮೆದುಳಿಗೆ ಶಕ್ತಿಯನ್ನು ನೀಡಿ, ಏಕಾಗ್ರತೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಈ ಆಹಾರದ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಿ ಬೆಳಗಿನ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ. ಪೌಷ್ಟಿಕಾಂಶ ಪದಾರ್ಥಗಳಾದ ಮೊಳಕೆ ಕಾಳುಗಳು, ಹಾಲು, ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹವು ಆರೋಗ್ಯವಾಗಿರುತ್ತದೆ.

6. ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡಿ

ಬೆಳಿಗ್ಗೆ ಎದ್ದ ತಕ್ಷಣವೇ ಮೊಬೈಲ್​, ಟಿವಿ ನೋಡುವುದು, ಅದರಲ್ಲಿ ಬರುವಂತಹ ವಿಚಾರದ ಕಡೆಯಲ್ಲಿ ಗಮನ ಕೊಡುವುದನ್ನು ನಿಲ್ಲಿಸಿ. ಅದರಲ್ಲಿ ಬರುವಂತಹ ಕೆಲವು ವಿಚಾರಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸಿ, ಇದು ನಿಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಇದರಿಂದ ಇಡೀ ದಿನ ವ್ಯರ್ಥವಾಗಬಹುದು. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net