Virat Kohli : ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿನಿಯೊಬ್ಬಳು, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ರೆಸ್ಟೋರೆಂಟ್‌ನಲ್ಲಿ 525 ರೂಪಾಯಿ ಮೌಲ್ಯದ ಖಾದ್ಯವನ್ನು ಆರ್ಡರ್ ಮಾಡಿದ ಬಳಿಕ ನಿರಾಶೆಗೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿನಿ ಮಾಡಿರುವ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಒಡೆತನದ ರೆಸ್ಟೊ ಬಾರ್ ಒನ್8 ಕಮ್ಯೂನ್‌ನಲ್ಲಿ ಈ ಘಟನೆ ನಡೆದಿದೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿನಿ ಸ್ನೇಹಾ, ಕೊಹ್ಲಿ ಅವರ ರೆಸ್ಟೋರೆಂಟ್‌ನಲ್ಲಿ ಪೆರಿಪೆರಿ ಕಾರ್ನ್ ರಿಬ್ಸ್ ( ಬೇಯಿಸಿದ ಜೋಳ) ಗಾಗಿ 525 ರೂ. ಪಾವತಿಸಿರುವುದಾಗಿ ಬಹಿರಂಗಪಡಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೀವು ಫೋಟೋವನ್ನು ನೋಡಿದರೆ, ಬೇಯಿಸಿದ ಜೋಳದ ತುಂಡುಗಳನ್ನು ನೋಡಬಹುದು. ಅದಕ್ಕೆ ಪಾರ್ಮೆಸನ್ ಚೀಸ್ ಮತ್ತು ಸ್ಕಲ್ಲಿಯನ್ ಸೇರಿಸಿ ಸ್ನೇಹಾ ಅವರಿಗೆ ಬಡಿಸಲಾಗಿದೆ. ಇವೆರಡರ ಮಿಶ್ರಣದಿಂದ ಒಳ್ಳೆಯ ರುಚಿ ಸಿಗುತ್ತದೆ.
ಸ್ನೇಹಾ ಹಂಚಿಕೊಂಡಿರುವ ಫೋಟೋಗೆ ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಆರ್ಡರ್ ಮಾಡುವ ಮೊದಲೇ ನಿಮಗೆ ಬೆಲೆ ತಿಳಿದಿದೆ, ಆದ್ದರಿಂದ ನಿಮ್ಮ ಅಳು ನಿಲ್ಲಿಸಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರೆಸ್ಟೋರೆಂಟ್‌ನ ವಾತಾವರಣ, ಸ್ವಚ್ಛತೆ ಮತ್ತು ಸೇವೆಯಂತಹ ವಿಷಯಗಳಿಗೆ ಹೆಚ್ಚಿನ ಹಣವನ್ನು ಪಾವತಿಸಲಾಗುತ್ತದೆ ಎಂದಿದ್ದಾರೆ. ಏನೇ ಆಗಲಿ ಬೆಲೆ ತುಂಬಾ ಜಾಸ್ತಿ ಆಯ್ತು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
paid rs.525 for this today at one8 commune 😭 pic.twitter.com/EpDaVEIzln
— Sneha (@itspsneha) January 11, 2025
ಪ್ರಮುಖ ನಗರಗಳಲ್ಲಿರುವ ಫ್ಯಾನ್ಸಿ ರೆಸ್ಟೋರೆಂಟ್‌ಗಳಲ್ಲಿ ಬೆಲೆಗಳು ಹೆಚ್ಚು ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ, ಬೆಲೆಗೆ ತಕ್ಕಂತೆ ಆಹಾರ ನೀಡದೇ ಇರುವುದು ಆಹಾರ ಪ್ರಿಯರನ್ನು ಕಾಡುತ್ತಿದೆ. ಅದೇ ಆಹಾರವನ್ನು ಹೊರಗೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ, ಐಷಾರಾಮಿ ಅನುಭವವನ್ನು ಪಡೆಯಲು ಕೆಲವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅದೇ ಹಣಕ್ಕೆ ಹೊರಗಡೆ ಉತ್ತಮ ಆಹಾರವನ್ನು ಬೇಕಾದಷ್ಟು ಸವಿಯಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)
ನೀವು ಆಗಾಗ ಪಾನಿಪುರಿ ತಿಂತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ನ್ಯೂಸ್! Panipuri
ಕೇವಲ ಒಂದು ಪೀಸ್ ಪೈನಾಪಲ್ ತಿಂದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Pineapple