ನಮ್ಮ ದೇಶದ ಬಾಹ್ಯಸಾಲ ಎಷ್ಟಿರಬಹುದು ಅನ್ನೋ ಅಂದಾಜಿದೆಯಾ?

Dollor
Published on

ನವದೆಹಲಿ: ನಮ್ಮ ದೇಶದ ಬಾಹ್ಯಸಾಲ ಎಷ್ಟಿರಬಹುದು ಅನ್ನೋ ಅಂದಾಜೇನಾದರೂ ಇದೆಯಾ? ಇಂಥದ್ದೊಂದು ಕುತೂಹಲ ತಣಿಸುವ ಡೇಟಾವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಜೂನ್​ 30ಕ್ಕೆ ಅನ್ವಯವಾಗುವಂತೆ ದೇಶದ ಜಿಡಿಪಿಗೆ ಹೋಲಿಸಿದರೆ ಶೇಕಡ 21.8 ಇದೆ. ಮಾರ್ಚ್​ 31ಕ್ಕೆ ಇದು ಶೇಕಡ 20.6 ಇತ್ತು. ಮಾರ್ಚ್​ ಅಂತ್ಯಕ್ಕೆ ಹೋಲಿಸಿದರೆ ಜೂನ್ ಅಂತ್ಯಕ್ಕೆ ಬಾಹ್ಯ ಸಾಲದ ಪ್ರಮಾಣ 28,683.35 ಕೋಟಿ ರೂಪಾಯಿ ಕಡಿಮೆಯಾಗಿದೆ.

ಜೂನ್ ಅಂತ್ಯದ ಡೇಟಾ ಪ್ರಕಾರ, ಭಾರತದ ಬಾಹ್ಯ ಸಾಲ ಬರೋಬ್ಬರಿ 40,78,257.47 ಕೋಟಿ ರೂಪಾಯಿ. ಮೌಲ್ಯಮಾಪನದ ಲೋಪದೋಷಗಳ ಹೊರತಾಗಿ ನೋಡುವುದಾದರೆ ಬಾಹ್ಯ ಸಾಲ ಪ್ರಮಾಣ 33,096.17 ಕೋಟಿ ರೂಪಾಯಿ ಕಡಿಮೆಯಾಗಬೇಕಾಗಿತ್ತು. ಬಾಹ್ಯಸಾಲದ ಪೈಕಿ ವಾಣಿಜ್ಯ ಸಾಲದ್ದೇ ದೊಡ್ಡ ಪಾಲು ಶೇಕಡ 38.1. ನಂತರದ್ದು ಅನಿವಾಸಿಗಳ ಠೇವಣಿ ಶೇಕಡ 23.9. ನಂತರದ್ದು ಅಲ್ಪಾವಧಿ ವಾಣಿಜ್ಯ ಸಾಲ ಶೇಕಡ 18.2.

ದೀರ್ಘಾವಧಿ ಸಾಲ (ಒಂದು ವರ್ಷ ಮೇಲ್ಪಟ್ಟ ಒರಿಜಿನಲ್ ಮೆಚುರಿಟಿಯೊಂದಿಗಿನ)ದ ಪ್ರಮಾಣ 33,05,939.9 ಕೋಟಿ ರೂಪಾಯಿ ಆಗಿದೆ. ಇದು ಮಾರ್ಚ್​ಗೆ ಹೋಲಿಸಿದರೆ 14,709.41 ಕೋಟಿ ರೂಪಾಯಿ ಕಡಿಮೆ. ಅಲ್ಪಾವಧಿ ಸಾಲ ಮಾರ್ಚ್​ ಕೊನೆಗೆ ಶೇಕಡ 19.1 ಇದ್ದುದ್ದು, ಜೂನ್ ಅಂತ್ಯಕ್ಕೆ ಶೇಕಡ 18.9 ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net