ಸಾಮಾನ್ಯವಾಗಿ ಮಳೆಗಾಲ, ಚಳಿಗಾಳ ಬಂತೆಂದರೆ ಸಾಕು ಉಸಿರಾಟದ ತೊಂದರೆ ಎದುರಾಗುತ್ತದೆ. ಮೂಗಿನಿಂದ ಸುಲಭವಾಗಿ ಉಸಿರಾಡಲು ಸಾಧ್ಯವಾಗದಿದ್ದಾಗ ಅದು ಭಯಾನಕವಾಗಬಹುದು. ಬಾಯಿಯ ಮೂಲಕ ನಿರಂತರವಾಗಿ ಉಸಿರಾಡಲು ಒತ್ತಾಯಿಸಬಹುದು.ವಾತಾವರಣದಿಂದ ಈಗಾಗುತ್ತಿದೆ ಎಂದು ಅಂದುಕೊಳ್ಳುವವರೆ ಹೆಚ್ಚು. ಆದರೆ ಅದು ಸಾಮಾನ್ಯ ಶೀತವೋ ಅಥವಾ ನೀವು ನಾಸಲ್ ಪಾಲಿಪ್ಸ್‌ನಿಂದ ಬಳಲುತ್ತಿರುತ್ತೀರಿ ಎಂದು ತಿಳಿಯಲು ಮೂಗು ಮತ್ತು ಸೈನಸ್ ವೈದ್ಯರನ್ನು ಭೇಟಿ ಮಾಡಿದರೆ ಒಳಿತು. ನಾಸಲ್ಪಾಲಿಪ್ಸ್ನಿಂದ ಉಂಟಾಗುವ ಉಸಿರಾಟದ ತೊಂದರೆಗಳ ಕುರಿತು ಮಾಹಿತಿ ನೀಡಲಾಗಿದೆ.
ಇದನ್ನು ಓದಿ: ಕ್ಯಾನ್ಸರ್ ನಿಯಂತ್ರಿಸಲು ಸಕ್ಕರೆಯಿಂದ ದೂರವಿರಿ; ಆರೋಗ್ಯದ ಕುರಿತು ಮಹತ್ವದ ಸಲಹೆ ನೀಡಿದ ಖ್ಯಾತ ನಟ
ನಾಸಲ್ ಪಾಲಿಪ್ಸ್: ನಾಸಲ್ ಪಾಲಿಪ್ಸ್ ಉರಿಯೂತದ ಅಂಗಾಂಶಗಳಾಗಿವೆ. ಅದು ಮೂಗಿನ ಅಥವಾ ಸೈನಸ್ ಕುಳಿಗಳ ಒಳಗಿನ ಅಂಗಾಂಶಗಳ ಒಳಪದರದಿಂದ ಬೆಳೆಯುತ್ತದೆ. ಒಂದೇ ಸಮಯದಲ್ಲಿ ಮೂಗಿನ ಎರಡು ಒಳ್ಳೆಗಳಲ್ಲಿ ಬೆಳೆಯುತ್ತದೆ. ಆದರೆ ಅದು ಕ್ಯಾನ್ಸರ್ ಅಲ್ಲ ಜತೆಗೆ ನೋವುಂಟು ಮಾಡುವುದಿಲ್ಲ. ಅನೇಕ ಜನರು ಮೂಗಿನ ಪಾಲಿಪ್ಸ್ಗಳನ್ನು ಹೊಂದಿರುತ್ತಾರೆ ಆದರೆ ಆ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ನಾಸಲ್ ಪಾಲಿಪ್ಸ್ ಇದೆ ಎಂದು ತಿಳಿಯುವುದು ಹೇಗೆ..? ಅದರ ಲಕ್ಷಣಗಳೇನು ಇಲ್ಲಿದೆ ಮಾಹಿತಿ..
ನಾಸಲ್ ಪಾಲಿಪ್ಸ್ ರೋಗದ ಲಕ್ಷಣಗಳು: ಮೂಗಿನಿಂದ ರಕ್ತಸ್ರಾವ, ಮೇಲಿನ ಹಲ್ಲುಗಳಲ್ಲಿ ನೋವು, ಆಗಾಗ್ಗೆ ಸ್ರವಿಸುವ ಮೂಗು, ಗೊರಕೆ ಹೊಡೆಯುವುದು, ವಾಸನೆ ಗ್ರಹಿಸುವುದು ಕಡಿಮೆಯಾಗುವುದು, ರುಚಿಯ ಪ್ರಜ್ಞೆ ಕಡಿಮೆಯಾಗುವುದು, ದೀರ್ಘಕಾಲದ ಸೈನಸ್ ಸೋಂಕುಗಳು, ನಿರಂತರ ಕೆಮ್ಮು ಇವು ನಾಸಲ್ ಪಾಲಿಪ್ಸ್ನ ಲಕ್ಷಣವಾಗಿವೆ. ಆದರೆ ನಿಮಗೆ ಇದೆಲ್ಲಾ ಸಾಮಾನ್ಯ ಶೀತದ ಲಕ್ಷಣಗಳು ಎಂದು ಗೊಂದಲವಾಗಬಹುದು. ಈ ಲಕ್ಷಣಗಳಲ್ಲಿ ಹೆಚ್ಚಿನವು ಶೀತ, ಜ್ವರ ಮತ್ತು ಇತರ ಸೋಂಕುಗಳಿಗೆ ಲಕ್ಷಣವೇ ನಿಜ. ಆದರೆ ಈ ರೋಗಲಕ್ಷಣಗಳು ದೀರ್ಘಕಾಲದವರೆಗೆ (ಸಾಮಾನ್ಯವಾಗಿ 2 ವಾರಗಳವರೆಗೆ) ಮುಂದುವರಿದರೆ ನಾಸಲ್ ಪಾಲಿಪ್ಸ್ ಇದೆ ಎಂದು ಅರ್ಥ. ಆ ಸಮಯದಲ್ಲಿ ಒಮ್ಮೆ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ.
ನಾಸಲ್ ಪಾಲಿಪ್ಸ್ಗೆ ಕಾರಣ ಏನೀರಬಹುದು?:
- ಅಸ್ತಮಾ: ಅಸ್ತಮಾದಿಂದ ಬಳಲುತ್ತಿರುವವರಿಗೆ ನಾಸಲ್ ಪಾಲಿಪ್ಸ್ ಬರುವ ಸಾಧ್ಯತೆ ಹೆಚ್ಚು. NIH ನಡೆಸಿದ ಅಧ್ಯಯನದ ಪ್ರಕಾರ ಅಸ್ತಮಾ ಹೊಂದಿರುವ 7 ರಿಂದ 15 ಪ್ರತಿಶತದಷ್ಟು ಜನರು ನಾಸಲ್ ಪಾಲಿಪ್ಸ್ ಹೊಂದಿರುತ್ತಾರೆ.
- ಅನುವಂಶಿಕ ಕಾರಣಗಳು: ನಾಸಲ್ ಪಾಲಿಪ್ಸ್ ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಅದರಿಂದ ಪ್ರಭಾವಿತವಾಗುವ ಸಾಧ್ಯತೆಗಳು ಇರುತ್ತವೆ.
ಇತರ ಆರೋಗ್ಯ ಸಮಸ್ಯೆಗಳು: ಸಿಸ್ಟಿಕ್ ಫೈಬ್ರೋಸಿಸ್ನಂತಹ ಸಮಸ್ಯೆಗಳು ನಾಸಲ್ ಪಾಲಿಪ್ಸ್ಗೆ ಕಾರಣವಾಗಬಹುದು.
ಉದ್ಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿ ಕಂಡು ಕಂಪನಿಯೇ ಶಾಕ್; ಅಪ್ಲಿಕೇಷನ್ನಲ್ಲಿ ಏನೇನಿತ್ತು ಗೊತ್ತಾ?