PHOTOS| ‘ಲೇಡಿ’ ಕ್ರಿಕೆಟಿಗರ ಸೌಂದರ್ಯಕ್ಕೆ ನೆಟ್ಟಿಗರು ಫಿದಾ!

lady cricketrs1
Published on

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಕಳೆದ 3 ತಿಂಗಳಿನಿಂದ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಟೀಮ್ ಇಂಡಿಯಾ ಆಟಗಾರರೆಲ್ಲ ಮನೆಯಲ್ಲೇ ಲಾಕ್‌ಡೌನ್ ಆಗಿದ್ದರು. ಇದರ ನಡುವೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗರ ಬಾಲ್ಯದ ಚಿತ್ರಗಳನ್ನು ಪ್ರಕಟಿಸಿ ಇವರು ಯಾರು ಗುರುತಿಸಿ ಎಂಬ ಸವಾಲು ಎಸೆಯುತ್ತಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕ್ರಿಕೆಟ್ ಪ್ರೇಮಿಗಳು, ‘ಫೇಸ್ ಆ್ಯಪ್’ ಮೂಲಕ ಸ್ಟಾರ್ ಕ್ರಿಕೆಟಿಗರನ್ನು ಹುಡುಗಿಯರನ್ನಾಗಿ ಪರಿವರ್ತಿಸಿ, ಅವರ ಗುರುತು ಪತ್ತೆ ಹಚ್ಚುವಂತೆ ಸವಾಲೆಸೆಯುತ್ತಿದ್ದಾರೆ.

ಫೇಸ್ ಆ್ಯಪ್ ಮೂಲಕ ಹೆಣ್ಣಾಗಿ ಪರಿವರ್ತನೆಗೊಂಡಿರುವ ಕೆಲ ಸ್ಟಾರ್ ಕ್ರಿಕೆಟಿಗರ ಸೌಂದರ್ಯಕ್ಕೆ ನೆಟ್ಟಿಗರು ಮರುಳಾಗುತ್ತಿದ್ದಾರೆ. ಹೆಣ್ಣಾಗಿದ್ದರೆ ಹೆಚ್ಚು ರೂಪವತಿಯರಾಗಿ ಇರುತ್ತಿದ್ದರು ಎಂದೂ ಕಮೆಂಟ್‌ಗಳನ್ನು ಹಾಕಿ ಕಾಲೆಳೆಯುತ್ತಿದ್ದಾರೆ. ಇತ್ತೀಚೆಗೆ ಸ್ಪಿನ್ನರ್ ಯಜುವೇಂದ್ರ ಚಾಹಲ್, ಸಹ-ಆಟಗಾರ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅವರು ಹುಡುಗಿಯಾಗಿದ್ದರೆ ಹೇಗೆ ಕಾಣಿಸುತ್ತಿದ್ದರು ಎಂಬ ಚಿತ್ರವನ್ನು ಟ್ವೀಟ್ ಮಾಡಿದ್ದರು. ಜತೆಗೆ ‘ರೋಹಿತಾ ಶರ್ಮ’ ಎಂದು ಹೆಸರಿಸಿದ್ದರು. ಅಲ್ಲದೆ ರೋಹಿತ್ ಶರ್ಮ ಅಭಿಮಾನಿಗಳು ಚಾಹಲ್ ಚಿತ್ರವನ್ನೂ ಹುಡುಗಿಯಾಗಿ ಪರಿವರ್ತಿಸಿ ತಮಾಷೆ ಮಾಡುತ್ತಿದ್ದಾರೆ.

ಕಳೆದ ವರ್ಷ ಭಾರತದ ಹಾಲಿ ಕ್ರಿಕೆಟಿಗರು ಇನ್ನು 25 ವರ್ಷಗಳ ಬಳಿಕ ಹೇಗೆ ಕಾಣಿಸುತ್ತಾರೆ ಎಂಬ ಫೇಸ್ ಆ್ಯಪ್ ಚಮತ್ಕಾರದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಈ ನಡುವೆ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳೂ ತಮ್ಮ ದೇಶದ ಕ್ರಿಕೆಟಿಗರ ಚಿತ್ರಗಳನ್ನು ಹುಡುಗಿಯರಾಗಿ ಬದಲಾಯಿಸಿ, ಗುರುತಿಸುವ ಚಾಲೆಂಜ್ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net