ವಿಜಯ್​, ಸಂಚಾರಿ ವಿಜಯ್​ ಆಗಿದ್ದು ಹೇಗೆ ಗೊತ್ತಾ?

Sanchari Vijay - Final 4
Published on

ಬೆಂಗಳೂರು: ಸಂಚಾರಿ ವಿಜಯ್​ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿದ್ದು, ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದು, ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದು ... ಇವೆಲ್ಲವೂ ಗೊತ್ತೇ ಇದೆ. ಆದರೆ, ವಿಜಯ್​ ಎಂಬ ಸಾಮಾನ್ಯ ಯುವಕ, ಸಂಚಾರಿ ವಿಜಯ್​ ಆಗಿದ್ದು ಹೇಗೆ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ನಾಟಕಗಳಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ವಿಜಯ್​ಗೆ, ‘ಸಾವು ಧ್ಯೇಯಕ್ಕಿಲ್ಲ’ ಎಂಬ ನಾಟಕದಲ್ಲಿ ಅವಕಾಶ ಸಿಕ್ಕಿತಂತೆ. ಡೈಲಾಗ್ ಇಲ್ಲದ ಸಣ್ಣ ಪಾತ್ರವದು. ಸ್ಟೇಜ್​ನಲ್ಲಿ ನಿಂತಿದ್ದು ಬರಬೇಕು. ಆ ಪಾತ್ರಕ್ಕಾಗಿ ವಿಜಯ್ ಪ್ರತಿದಿನ ಎದ್ದು ಮೂರು ನಾಲ್ಕು ತಿಂಗಳುಗಳ ಕಾಲ ಅಲ್ಲಿಗೆ ಪ್ರಾಕ್ಟೀಸಿಗೆ ಹೋಗುತ್ತಿದ್ದರಂತೆ. ಬೆಳಿಗ್ಗೆ ಪ್ರಾಕ್ಟೀಸು, ನಂತರ ಕಾಲೇಜು, ಸಂಜೆ ಕರ್ನಾಟಕ ಸಂಗೀತ ಕಲಿಕೆ. ಅದು ಮುಗಿಸಿ ಮತ್ತೊಂದು ನಾಟಕ ಪ್ರಾಕ್ಟೀಸ್. ಅದರ ನಂತರ 9 ಗಂಟೆಗೆ ಹಿಂದೂಸ್ತಾನಿ ಸಂಗೀತ ಕಲಿಕೆ. ಹೀಗೆ ಒಂದು ಕ್ಷಣವೂ ಪುರುಸೊತ್ತಿಲ್ಲದೆ, ಒಂದಲ್ಲ ಒಂದು ಕಲಿಕೆಯಲ್ಲಿ ತೊಡಿಗಿಸಿಕೊಂಡಿದ್ದರಂತೆ ವಿಜಯ್​.

ಅದರ ಫಲವಾಗಿಯೇ ಮಂಗಳಾ ಅವರ ‘ಸಂಚಾರಿ’ ತಂಡದ ‘ಅರಹಂತ’ ನಾಟಕದಲ್ಲಿ ಪ್ರಮುಖ ಪಾತ್ರ ಸಿಕ್ಕಿತು. ಆ ನಾಟಕ ಯಶಸ್ವಿಯಾಗುತ್ತಿದ್ದಂತೆಯೇ, ಅವರು ಇನ್ನೂ ಕೆಲವು ನಾಟಕಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ಸ್ವಲ್ಪ ಜನಪ್ರಿಯವಾಗುತ್ತಿದ್ದಂತೆಯೇ ಕೆಲಸ ಬಿಟ್ಟ ವಿಜಯ್​, ನಂತರ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಸಂಚಾರಿ ತಂಡದಿಂದ ಗುರುತು ಸಿಕ್ಕಿದ್ದರಿಂದ ತಮ್ಮ ಹೆಸರಿನ ಹಿಂದೆ ಸಂಚಾರಿ ಸೇರಿಸಿಕೊಂಡು, ಸಂಚಾರಿ ವಿಜಯ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net