

ಬೆಂಗಳೂರು: ದೇಶದ ಸ್ಟಾರ್ಟ್ಅಪ್ ಹಬ್ ಎಂದೇ ಖ್ಯಾತಿ ಪಡೆದಿರುವ ಉದ್ಯಾನನಗರಿ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ವಿಚಾರವಾಗಿ ಅಷ್ಟೇ ಅಪಖ್ಯಾತಿಯನ್ನುಹೊಂದಿದೆ.
ಟ್ರಾಫಿಕ್ ಸಮ್ಯೆಯಿಂದಾಗಿ ಕೆಲವರು ಆಫೀಸ್ಗೆ ತೆರಳುವ ಮಾರ್ಗಮಧ್ಯೆ ಲ್ಯಾಪ್ಟಾಪ್ಅಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಸುಮಾರು 1.4 ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಿಎಂಟಿಸಿ ಚಾಲಕನೋರ್ವ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವ ವೇಳೆ ಆತ ತನ್ನ ಊಟವನ್ನು ಸಿಗ್ನಲ್ ಬಿಡುವಷ್ಟರಲ್ಲೇ ತಿಂದು ಮುಗಿಸುವುದು ಕಂಡು ಬರುತ್ತದೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಲಕನ ಕುರಿತು ಸಹಾನೂಬೂತಿ ವ್ಯಕ್ತಪಡಿಸಿರುವ ನೆಟ್ಟಿಗರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಟ್ರಾಫಿಕ್ ಸಮಸ್ಯೆಯಿಂದಾಗಿ ಚಾಲಕ ನೆಮ್ಮದಿಯಿಂದ ಆಹಾರ ಸೇವಿಸಲು ಆಗದಿರುವುದು ದುಃಖಕರವಾಗಿದೆ. ಕೆಲವರು ತಮ್ಮ ಆಫೀಸ್ಗೆ ತಲುಪವಷ್ಟರಲ್ಲೇ ಫಿಲಂ ನೋಡಿ ಮುಗಿಸಿರುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಹಾಕಿದ್ದಾರೆ.