ಮಧೂರು: ರಾಮಾಯಣ ಮಾಸದ ನಿರಂತರ 31 ದಿನಗಳ ಮನೆ ಮನೆ ಭಜನೆ ಸಮಾರೋಪ ಸಮಾರಂಭ ಉಳಿಯತಡ್ಕದ ಶ್ರೀ ವಾಸುದೇವ ಗಟ್ಟಿ ಮತ್ತು ಯಶೋದಾ ದಂಪತಿಯ ನಿವಾಸದಲ್ಲಿ ನಡೆಯಿತು.
15 ವರ್ಷಗಳಿಂದ ರಾಮಾಯಣ ಮಾಸದಲ್ಲಿ ನಿರ್ವಹಿಸುತ್ತಾ ಬಂದಿರುವ ಮನೆ ಮನೆ ಭಜನೆ ಪ್ರೇರಕ ಶಕ್ತಿಯು, ಇದಕ್ಕೆ ಕಾರಣಕರ್ತರು ಆಗಿರುವ ಭಜನಾ ಗುರು ಹರಿದಾಸ್ ಜಯಾನಂದ ಕುಮಾರ್ ಅಧ್ಯಕ್ಷತೆ ವಹಿಸಿ ಮನೆ ಮನೆ ಭಜನೆ ಮಾಡುವುದರ ಹಿಂದಿರುವ ಸದುದ್ದೇಶ ತಿಳಿಸಿಕೊಟ್ಟರು.
ವಿ.ಹಿಂ.ಪ. ಕಾಸರಗೋಡು ನಗರ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ., ಮೋಹನ್ ಆಚಾರ್ಯ ಪುಳ್ಕೂರು, ವಾಸುದೇವ ಗಟ್ಟಿ, ಶಿವರಾಂ ಶೆಟ್ಟಿ, ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಭಜನಾ ಸಂಕೀರ್ತನೆ ಜರುಗಿತು. ರೋಹಿತಾಕ್ಷ ಸ್ವಾಗತಿಸಿ, ಯಶೋದಾ ಗಟ್ಟಿ ವಂದಿಸಿದರು. ಗುರುಗಳ ಪಾದ ಪೂಜೆ ಬಳಿಕ ಮಂಗಳಾಚರಣೆ ನಡೆಯಿತು.