ವಿಶ್ವದ ಅತಿ ದೊಡ್ಡ 'ಹಾಟ್ ಪಾಟ್' ರೆಸ್ಟೋರೆಂಟ್​​​ ಹೇಗಿದೆ ಗೊತ್ತಾ?; ಇದರ ಹಿಂದಿದೆ ಅನೇಕ ಕಥೆಗಳು

hotpot
Published on

ಚೀನಾ: ಚೀನಾದ ದಕ್ಷಿಣ ಮಧ್ಯ ಭಾಗದಲ್ಲಿರುವ ಹೆಚ್ಚು ಕೈಗಾರಿಕೀಕರಣಗೊಂಡ ನಗರವಾದ ಚಾಂಗ್‌ಕಿಂಗ್‌ನಲ್ಲಿ 'ಹಾಟ್ ಪಾಟ್' ಪ್ರಮುಖ ಭಕ್ಷ್ಯವಾಗಿದೆ. ಎಲ್ಲೆಡೆ ಹಾಟ್ ಪಾಟ್ ರೆಸ್ಟೋರೆಂಟ್‌ಗಳಿದ್ದು, ಈ ಹಾಟ್ ಪಾಟ್ ಎಂದರೇನು?, ಜನರು ಅದನ್ನು ಏಕೆ ಇಷ್ಟಪಡುತ್ತಾರೆ? ಅತಿ ದೊಡ್ಡ ಹಾಟ್ ಪಾಟ್ ರೆಸ್ಟೋರೆಂಟ್‌ ಯಾವುದು? ಮುಂತಾದ ಮಾಹಿತಿಗಾಗಿ ಮುಂದೆ ಓದಿ...

ಹಾಟ್ ಪಾಟ್ ಹಿಂದಿನ ಕಥೆ

ಹಾಟ್ ಪಾಟ್ ಎಂಬುದು ಸ್ಥಳೀಯರ ಭಕ್ಷ್ಯವಾಗಿದೆ. ಅದರಲ್ಲೂ ಚಾಂಗ್‌ಕಿಂಗ್‌ ಹಾಟ್ ಪಾಟ್ ಮೂಲದ ಬಗ್ಗೆ ವಿವಿಧ ಕಥೆಗಳಿವೆ. ಅವುಗಳಲ್ಲಿ ಒಂದು ಮಾತ್ರ ಸಿಕ್ಕಾಪಟ್ಟೆ ಜನಪ್ರಿಯ. 19 ನೇ ಶತಮಾನದ ಆರಂಭದಲ್ಲಿ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಚಾಂಗ್‌ಕಿಂಗ್ ಚೋಟಿಯನ್‌ಮೆನ್ ವಾರ್ಫ್‌ನಲ್ಲಿ, ಚಳಿಗಾಲದಲ್ಲಿ ದೋಣಿ ನಡೆಸುವವರು ಮಾಂಸವನ್ನು ತೆಗೆದುಕೊಂಡು ಮೆಣಸಿನಕಾಯಿ ಮತ್ತು ಸಿಚುವಾನ್ ಪೆಪ್ಪರ್‌ಕಾರ್ನ್‌ಗಳ ಮಸಾಲೆಯುಕ್ತ ಪದಾರ್ಥಗಳ ಜೊತೆ ಕುದಿಸುತ್ತಿದ್ದರು. ನಂತರ ಬೇಯಿಸಿದ ಆಹಾರವನ್ನು ಕಾಂಡಿಮೆಂಟ್ಸ್‌ನಲ್ಲಿ ಅದ್ದಿ, ರುಚಿಕರವಾದ ಖಾದ್ಯವನ್ನು ತಯಾರಿಸಲಾಗುತ್ತಿತ್ತು. ಇದು ಕ್ರಮೇಣ ನಗರದಾದ್ಯಂತ ಖ್ಯಾತಿ ಪಡೆಯಿತು.

900 ಟೇಬಲ್ಸ್, 5,800 ಆಸನಗಳು

ನಿಜಹೇಳಬೇಕೆಂದರೆ ಚಾಂಗ್‌ಕಿಂಗ್ ಪ್ರಪಂಚದ ಅತಿದೊಡ್ಡ ಹಾಟ್ ಪಾಟ್ ರೆಸ್ಟೊರೆಂಟ್‌ಗಳಿಗೆ ನೆಲೆಯಾಗಿದ್ದು, ಪಿಪಾ ಯುವಾನ್ ಪ್ರಪಂಚದಲ್ಲೇ ಅತಿ ದೊಡ್ಡ ಹಾಟ್ ಪಾಟ್ ರೆಸ್ಟೋರೆಂಟ್ ಆಗಿದೆ. ಇಲ್ಲಿ ಸುಮಾರು 900 ಟೇಬಲ್‌ಗಳಿದ್ದು, ಒಂದೇ ಸಮಯದಲ್ಲಿ ಸುಮಾರು 5,800 ಜನರು ಕುಳಿತುಕೊಳ್ಳಬಹುದು. ನೂರಾರು ಟೇಬಲ್‌ಗಳ ನಡುವೆ ಕಾಯ್ದಿರಿಸಿದ ಟೇಬಲ್ ಅನ್ನು ಪತ್ತೆಹಚ್ಚಲು ಹೆಚ್ಚಿನವರಿಗೆ ಮಾಹಿತಿ ಬೇಕಾಗುತ್ತವೆ.

ಸಿಬ್ಬಂದಿಗಳೆಷ್ಟು?

ಚೀನಾದಾದ್ಯಂತ ಜನರು ವೈಯಕ್ತಿಕವಾಗಿ ವಿಶ್ವದ ಅತಿದೊಡ್ಡ ಹಾಟ್ ಪಾಟ್ ರೆಸ್ಟೋರೆಂಟ್​​ಗೆ ಬರುತ್ತಿರುತ್ತಾರೆ. ಹಾಗಾದರೆ ನಿತ್ಯ ಇಲ್ಲಿ ತಯಾರಾಗುವ ಆಹಾರವೆಷ್ಟು ಎಂದು ಲೆಕ್ಕ ಹಾಕುತ್ತಿದ್ದಾರಾ?, ಇಲ್ಲಿ ಪ್ರತಿದಿನ ಟನ್‌ಗಳಷ್ಟು ಆಹಾರವನ್ನು ಬೇಯಿಸಲಾಗುತ್ತದೆ. ಅದನ್ನು ಸಾವಿರಾರು ಜನರಿಗೆ ಬಡಿಸಲು ನೂರಾರು ಮಾಣಿಗಳು, ಅಡುಗೆಯವರು, ಕ್ಯಾಷಿಯರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net