

ಹೊಸಪೇಟೆ: ಒಳ ಮೀಸಲಾತಿಗಾಗಿ ಅಲೆಮಾರಿ ಸಮುದಾಯಗಳಿಂದ ನಗರದ ಕೇಂದ್ರ ಅಂಚೆ ಕಚೇರಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ರವಾನಿಸಿದರು.
ನ್ಯಾಯಮೂರ್ತಿ ನಾಗಮೋಹನ್ ಆಯೋಗದ ವರದಿ ಇದೆ. ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ.1 ಮೀಸಲಾತಿ ನೀಡಲಾಗಿದೆ, ಆದರೆ, ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡದೆ ವಂಚಿಸಿದೆ. ಕಳೆದ 79 ವರ್ಷಗಳಿಂದ ಬೀದಿ ಕಸದಂತೆ ಬದುಕುತ್ತಿರುವ ನಾವು ನಮ್ಮ ಹಕ್ಕುಗಳಿಗಾಗಿ ನಿಂತಿದ್ದೇವೆ. ನಮ್ಮ ಪಾಲು ನಮ್ಮ ಹಕ್ಕು ಭರವಸೆಯೊಂದಿಗೆ ಬಯಸುತ್ತೇವೆ ಗಾಂಧಿ ಜಯಂತಿಯAದು ನಿಮ್ಮನ್ನು ಭೇಟಿ ಮಾಡಲು ನಾವು ದೆಹಲಿಗೆ ಬರುತ್ತಿದ್ದೇವೆ. ನಮ್ಮನ್ನು ಖಾಲಿ ಕೈಯಲ್ಲಿ ಹಿಂತಿರುಗಿಸಲಾಗುವುದಿಲ್ಲ ಎಂದು ನಾವು ನಂಬುತ್ತೇವೆ. ತಮಗೆ ನಮ್ಮ ಅಲೆಮಾರಿ 59 ಸಮುದಾಯಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಕರ ಪತ್ರಗಳನ್ನು ಕಳುಹಿಸುತ್ತಿದ್ದೇವೆ ಎಂದು ಪತ್ರದಲ್ಲಿ ಆಗ್ರಹಿಸಿದರು.
ಬುಡ್ಗ ಜಂಗಮ ಕರ್ನಾಟಕದ ಅಧ್ಯಕ್ಷ ಸಣ್ಣ ಮರೆಪ್ಪ, ಕಿನ್ನೂರು ಶೇಖಪ್ಪ, ಶೇಖರ್, ಜೆ.ರಮೇಶ, ಎ.ಮಾರೆಣ್ಣ, ಡೊಕ್ಕರಾಮಯ್ಯ ಇತರರಿದ್ದರು.