ಭಾವೈಕ್ಯತೆಯ ಮೊಹರಂ ಹಬ್ಬಕ್ಕೆ ತೆರೆ

news
ಹೊಸಪೇಟೆ ತಾಲೂಕಿನ ಕಮಾಲಪುರದಲ್ಲಿ ಬುಧವಾರ ಸಂಜೆ ಮಿಲನ ಕಾರ್ಯಕ್ರಮ ನಡೆಯಿತು. ಚಿತ್ರ: ಕುಶಲ್
Published on

ಹೊಸಪೇಟೆ: ಹಿಂದೂ-ಮುಸ್ಲಿA ಬಾಂಧವರ ಭಾವೈಕ್ಯತೆಯನ್ನು ಬಿಂಬಿಸುವ ಮೊಹರಂ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೊಹರಂ ದೇವರು(ಪೀರಲದೇವರು)ಗಳನ್ನು ಕರ್ಬಲ್‌ಗೆ ಕಳುಹಿಸಿಕೊಡುವ ಮೂಲಕ ಭಾನುವಾರ ಮೊಹರಂ ಹಬ್ಬಕ್ಕೆ ಸಂಭ್ರಮದ ತೆರೆ ಬಿದ್ದಿತು.

ಹೈದರಾಬಾದ್ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತ ಬಂದಿದ್ದರೂ ವಿಜಯನಗರ ಜಿಲ್ಲೆಯಲ್ಲಿ ಈ ಹಬ್ಬವನ್ನು 11 ದಿನ ಆಚರಣೆ ಮಾಡುವ ರೂಢಿ ಇದೆ. ತಾಲೂಕಿನಲ್ಲಿ ಆಚರಣೆ ನಡೆಯುತ್ತಿದ್ದು, ಇದರಲ್ಲೂ ಹೊಸಪೇಟೆ, ಕಮಲಾಪುರದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತ ಬಂದಿದ್ದಾರೆ. ಇಲ್ಲಿನ ಮಸೀದಿ ವ್ಯಾಪ್ತಿಯಲ್ಲಿ ಉಳಿದುಕೊಂಡಿರುವ ಮಾಹಿತಿಯಂತೆ ಕಳೆದ ನೂರು ವರ್ಷಗಳಿಂದ ಈ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತ ಬಂದಿದ್ದು, ಕಳೆದ 11 ದಿನಗಳಿಂದ ಹೊಸಪೇಟೆ ನಗರದ ಅಪಾರ ಭಕ್ತರನ್ನು ಹೊಂದಿರುವ ಪುರಾತನ ಪ್ರಸಿದ್ಧ ರಾಮಮಲಿ ಮಸೀದಿಯಲ್ಲಿ ಪ್ರತಿಷ್ಠಾಪನೆ ಮಾಡಿದ ರಾಮಲಿ ಸ್ವಾಮಿ ಹಾಗೂ ಚಿತ್ತವಾಡ್ಗಿಯ ಅಗಸರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಸಣ್ಣ ರಾಮಾಲಿ ಸ್ವಾಮಿ ಮಸೀದಿಯ ಮೊಹರಂ ದೇವರು ಹಾಗೂ ದೊಡ್ಡ ಮಸೀದಿಯ ದೇವರು, ಕಮಲಾಪುರ ಸಂಡೂರು ಸ್ವಾಮಿ, ಮುಸ್ತಫಾ ಸೇರಿದಂತೆ 200ಕ್ಕೂ ಹೆಚ್ಚು ದೇವರುಗಳನ್ನು ಪ್ರತಿಷ್ಠಾಪಿಸಿದ್ದು, ಮಂಗಳವಾರ ಕತಲರಾತ್ರಿ ದಿನವಾದ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ವಿಶೇಷ ಪೂಜೆ ಸಲ್ಲಿಸಿದರು. ಅಲಾಯಿ ಕುಣಿಗೆ ಉಪ್ಪು ಹಾಗೂ ದಾರವನ್ನು ಹಾಕಿ ತಮ್ಮ ಹರಕೆಯನ್ನು ತೀರಿಸಿದರೆ, ಬುಧವಾರ ಬೆಳಗಿನ ಜಾವ 3.30 ರ ಸುಮಾರಿಗೆ ಪೀರಲ ದೇವರುಗಳು ಅಗ್ನಿ ಪ್ರವೇಶ ಮಾಡಿ ಪವಾಡಗಳನ್ನು ನಡೆಸಿ ನಂತರ ನಗರಾದ್ಯಂತ ಬೆಳಗ್ಗೆ 6 ಗಂಟೆಯವರೆಗೂ ಮೆರವಣಿಗೆಗೆ ಬಂದು ದೇವರುಗಳು ಮುಖಾ ಮುಖಿಯಾದವು. ಸಂಜೆ 4 ಗಂಟೆಯಿAದ 6 ಗಂಟೆಯ ವರೆಗೆ ಪುನಃ ಮಿಲನ ಕಾರ್ಯಕ್ರಮ ನಡೆಸಲಾಯಿತು.

ಈ ದಶ್ಯವನ್ನು ನೋಡಲು ಇಲ್ಲಿನ ಮುಖ್ಯ ರಸ್ತೆಯಲ್ಲಿ ಸಾವಿರಾರು ಜನರು ನೆರೆದಿದ್ದರು. ಅಂತಿಮವಾಗಿ ದೇವರುಗಳನ್ನು ನಗರದ ಹೊರವಲಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳ ಹಾಗೂ ಕಮಲಾಪುರ ಕೆರೆಯ ಮೇಲೆ ಕರ್ಬಲ್ ಮಾಡಿ ಮೊಹರಂ ಹಬ್ಬಕ್ಕೆ ತೆರೆ ಎಳೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net