

ಹೊಸಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಸಮರ್ಪಕ ಅನುಷ್ಠ್ಠಾನಕ್ಕಾಗಿ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲೆಯ ಕೂಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟ ಕಡೆಯ ಕುಟುಂಬಕ್ಕೆ ಉದ್ಯೋಗದ ಭದ್ರತೆಗಾಗಿ ಜಾರಿ ಮಾಡಿರುವ ಕಾನೂನು ಕರ್ನಾಟಕದಲ್ಲಿ ಸರಿಯಾಗಿ ಅನುಷ್ಠ್ಠಾನ ಆಗುತ್ತಿಲ್ಲ. ದುಡಿಯುವ ಕೈಗಳಿಗೆ ನ್ಯಾಯ ಸಿಗುತ್ತಿಲ್ಲ, ಸರ್ಕಾರ ಹೊಸ ಹೊಸ ಆದೇಶ ಜಾರಿಗೆ ತಂದು ಕೂಲಿಯಿಂದ ಬದುಕು ಕಟ್ಟಿಕೊಳ್ಳಲು ಹೊರಟಿರುವ ಮನರೇಗಾ ಕಾರ್ಮಿಕರಿಗೆ ಹಿನ್ನಡೆ ಮಾಡುವ ಹುನ್ನಾರವನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭಾರೀ ಬಿಸಿಲು ಇರುವ ಹಿನ್ನೆಲೆ ಹಾಜರಾತಿ ಆಯ್ಯಪ್‌ನಲ್ಲಿ ಒಮ್ಮೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಕಳೆದ ಮೂರು ತಿಂಗಳಿAದ ಕೆಲಸ ಮಾಡಿದ ಕೂಲಿ ಹಣವನ್ನು ಕೊಡಲೇ ಕೂಲಿ ಭತ್ಯೆ ಸಮೇತವಾಗಿ ಬಿಡುಗಡೆ ಮಾಡಬೇಕು. ಈ ತಿಂಗಳಲ್ಲಿ ಜಾಬ್ ಕಾರ್ಡ್ ವಿತರಣೆ ಮಾಡಲು ಇರುವ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಲ್ಪಿಸಿ ಜಿಲ್ಲಾ ಪಂಚಾಯತ್ ಮಟ್ಟಕ್ಕೆ ಲಾಗಿನ್ ಮೂಲಕ ಪರಿಹಾರ ಸಿಗುವಂತೆ ಅನುಕೂಲ ಮಾಡಿಕೊಡಬೇಕು. ಮನರೇಗಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಮೃತಪಟ್ಟರೆ, ನೀಡುವ ಪರಿಹಾರ 2 ಲಕ್ಷ ರೂ. ಇದ್ದು, ಕನಿಷ್ಠÀ್ಠ 5 ಲಕ್ಷ ರೂ. ಸಿಗುವಂತೆ ಕಾನೂನು ಆಗಬೇಕು. ಮನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಸಿಗುವಂತೆ ಕಾನೂನು ರೂಪಿಸಬೇಕು. ಕೂಸಿನ ಮನೆಗಳನ್ನು ಸರಿಯಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
ವಿಜಯನಗರ ಕೂಲಿ ಕಾರ್ಮಿಕರಾದ ಸಾವಿತ್ರಮ್ಮ, ಹುಲುಗಪ್ಪ, ಮಹಾಬಲೇಶ್, ಈರಮ್ಮ, ಕರಿಬಸಪ್ಪ, ನಾಗರಾಜ, ಬಸಲಿಂಗಮ್ಮ, ದುರುಗಪ್ಪ, ರತ್ನಮ್ಮ, ಮಲ್ಲೇಶ್ ಕೊಗಳಿ, ಶೈನಾಜ್, ಮಂಜುಳಾ, ನಾರಾಯಣ, ಅಕ್ಕಮಹಾದೇವಿ ಮರಬ್ಬಿಹಾಳ್ರ, ಸುಧಾ ಹೊಸಕೆರೆ. ನಿಂಗಮ್ಮ, ಶಬ್ಬೀರ್ ಬಾಷಾÁ, ಎಲ್ಲಮ್ಮ ಇತ್ತಿತರರಿದ್ದರು.