ಹೊಸಪೇಟೆ: ರೋಟರಿ ಕ್ಲಬ್, ಸೇವಿಯರ್ ಅಂಗವಿಕಲರ ಸೇವಾ ಸಮಿತಿಯಿಂದ ಇಲ್ಲಿನ ರೋಟರಿ ಸಭಾಂಗಣದಲ್ಲಿ ಮೂರು ದಿನಗಳ ಅಂಧರ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಡಿಡಿಪಿಯು ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ಮಾತನಾಡಿ, ಸೇವಿಯರ್ ಸಂಸ್ಥೆ ಅಂಧರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಇಂತವರಿಗೆ ಸಹಕಾರ ಕೊಡಬೇಕು. ಅಂಧರ ಬಾಳಿಗೆ ಬೆಳಕಾಗಿ ಕೆಲಸ ಮಾಡುತ್ತಿದ್ದಾರೆ. ಚೆಸ್‌ನಲ್ಲಿ ಪಾಲ್ಗೊಂಡ ಎಲ್ಲರೂ ಗೆದ್ದಂತೆ ಎಂದು ಹೇಳಿದರು.
ವಿಜಯನಗರ ಕಾಲೇಜಿನ ಪ್ರಾದ್ಯಾಪÀಕ ಶರಣಬಸವೇಶ್ವರ ಮಾತನಾಡಿ, ಕಣ್ಣಿದ್ದು ಕುರುಡರಾಗಿರುವವರ ಮಧ್ಯೆ ಕಣ್ಣಿಲ್ಲದೆಯೂ ಒಳಗಣ್ಣಿನಿಂದ, ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಮಾಡುತ್ತಿರುವುದು ಸ್ನರಣಿಯ ಘಟನೆ. ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಾರೆ. ಎಲ್ಲ ಸರಿ ಇದ್ದರೂ ಜನರಿಗೆ ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ. ಕಂಡವರ ಬಾಳಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಅಂಗವಿಕಲರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಎAಎಸ್‌ಪಿಎಲ್ ಸಿಎಸ್‌ಆರ್ ಮುಖ್ಯಸ್ಥ ನಾಗರಾಜ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕುಮಾರ್, ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಇತರರಿದ್ದರು.