ಹಂಪಿಯಲ್ಲಿ ಚಿಕ್ಕ ರಥ ಎಳೆದು ವಿರೂಪಾಕ್ಷೇಶ್ವರ-ಚಂದ್ರಮೌಳೇಶ್ವರನಿಗೆ ಪೂಜೆ

27042021 Hampi Sri Pampa Virupakshaswara Chario
Published on

ಹೊಸಪೇಟೆ: ಕರೊನಾ ಹಿನ್ನೆಲೆಯಲ್ಲಿ ಹಂಪಿಯ ಶ್ರೀ ಪಂಪಾ ವಿರೂಪಾಕ್ಷೇಶ್ವರ ಮತ್ತು ಶ್ರೀ ಚಂದ್ರಮೌಳೇಶ್ವರ ಜೋಡು ರಥೋತ್ಸವ ರದ್ದುಪಡಿಸಿದ್ದರಿಂದ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯದಂತೆ ಚಿಕ್ಕ ರಥ ಎಳೆದು ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು.

ದೇವಸ್ಥಾನದ ಅರ್ಚಕರು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ರಾಜ್ಯ ಸೇರಿ ಆಂಧ್ರ, ತಮಿಳುನಾಡಿನಿಂದ ಭಕ್ತರು ಬರುತ್ತಿದ್ದರು. ಅತ್ಯಂತ ವಿಜೃಂಭಣೆಯಿಂದ ಜೋಡು ರಥೋತ್ಸವ ಜರುಗುತ್ತಿತ್ತು. ಎರಡು ವರ್ಷದಿಂದ ರಥೋತ್ಸವದ ಮೇಲೆ ಕರೊನಾ ಕರಿ ನೆರಳು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net