ಹೊಸಾಡು ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬ

kalika habba
ಹೊಸಾಡು ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬ ಕುಂದಬಾರಂದಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
Published on

ಕುಂದಾಪುರ: ಹೊಸಾಡು ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬ ಕುಂದಬಾರಂದಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು.

ಹಕ್ಲಾಡಿ ಗ್ರಾಪಂ ಅಧ್ಯಕ್ಷ ಸುಭಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗಾಣಿಗ, ಶಿಕ್ಷಣ ಸಂಯೋಜಕ ಯೋಗೀಶ್, ಹಕ್ಲಾಡಿ ಗ್ರಾಪಂ ಸದಸ್ಯರಾದ ಭಾಸ್ಕರ ಪೂಜಾರಿ, ಸಂಜೀವ ಬಿಲ್ಲವ, ರಾಜೀವ ಶೆಟ್ಟಿ ನೂಜಾಡಿ, ರತ್ನಾ ಜಿ.ಶ್ರೀಯಾನ್, ದಾನಿ ರವಿ ಎಸ್.ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶೈಲಜಾ, ರವಿಚಂದ್ರ, ನಾಗರಾಜ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ರಿಷಿ ಮತ್ತಿತರರು ಉಪಸ್ಥಿತರಿದ್ದರು.

ದಿನಕರ ಆಲೂರು, ಶಂಕರ ಕಳಿ ಆಲೂರು, ಶ್ರೀಧರ ಗುಜ್ಜಾಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕ್ಲಸ್ಟರ್‌ನ 10 ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಗಣಿತ ಚಟುವಟಿಕೆ, ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಖ್ಯಶಿಕ್ಷಕ ಶಿವರಾಜ್ ಭಂಡಾರಿ ಸ್ವಾಗತಿಸಿದರು. ಹೊಸಾಡು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಅರ್ಪಿತಾ, ದಿವ್ಯಾ ಸಹಕರಿಸಿದರು. ಶಿಕ್ಷಕಿ ವಸಂತಿ ವಂದಿಸಿದರು. ತಾರಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net