ಬೆಚ್ಚಿ ಬೀಳಿಸುವಂಥ ಭೀಕರ ಅಪಘಾತ; ಹೆದ್ದಾರಿಯ ಡಿವೈಡರ್​​ ಮೇಲೇ ಸಾಗಿದ ಟಿಪ್ಪರ್!

Accident F
Published on

ಆನೇಕಲ್: ಸುತ್ತಮುತ್ತ ಇದ್ದವರನ್ನೊಮ್ಮೆ ಬೆಚ್ಚಿಬೀಳಿಸುವಂಥ ಭೀಕರ ಅಪಘಾತವೊಂದು ನಡೆದಿದೆ. ಈ ಅಪಘಾತದ ವಿಡಿಯೋ ಕೂಡ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಅಪಘಾತದ ದೃಶ್ಯ ಎಂಥವರೂ ಒಮ್ಮೆ ಹುಬ್ಬೇರಿಸುವಂತಿದೆ.

ಹೊಸೂರಿನ ಬೆಂಗಳೂರು ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೊಸೂರು ಕಡೆಗೆ ಅತಿವೇಗದಲ್ಲಿ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ್ದು, ನಂತರ ಡಿವೈಡರ್​​ ಮೇಲೆಯೇ ಕೆಲವು ದೂರ ಸಾಗಿದೆ.

ಈ ಟಿಪ್ಪರ್​ ಕಾರು ಹಾಗೂ ದ್ವಿಚಕ್ರ ವಾಹನ ಸವಾರರಿಗೂ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಅಪಘಾತದಲ್ಲಿ ಟಿಪ್ಪರ್ ಚಾಲಕನ ಕಾಲು ಮುರಿತಕ್ಕೆ ಒಳಗಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕ್ರೇನ್ ಮೂಲಕ ಟಿಪ್ಪರ್ ತೆರವುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net